Search
Close this search box.

Bengaluru Rain: ಮಹದೇವಪುರ, ಯಲಹಂಕ ವಲಯದಲ್ಲಿ ಮುಂದುವರಿದ ಪ್ರವಾಹ ಸಮಸ್ಯೆ, ಅ.20ಕ್ಕೆ ಭಾರೀ ಮಳೆ

ಬೆಂಗಳೂರು, ಅಕ್ಟೋಬರ್ 17: ರಾಜ್ಯ ರಾಜಧಾನಿಯಲ್ಲಿ ಕೊಂಚ ಮಳೆ ಬಿಡುವು ನೀಡಿದ್ದರು ಸಹಿತ, ಈಗಾಗಲೇ ಬಿದ್ದ ಮಳೆಯಿಂದ ಸಮಸ್ಯೆಗಳು ಮುಂದುವರಿದಿವೆ. ನಗರದ ವಿವಿಧೆಡೆ ಜನರು ಸಾಕಷ್ಟು ಸಮಸ್ಯೆಗಳಿಂದ ಇನ್ನೂ ಹೊರ ಬಂದಿಲ್ಲ. ಇತ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತ್ವರಿತ ಪರಿಹಾರ ಕ್ರಮ ಕೈಗೊಳ್ಳುತ್ತಲೇ ಇದೆ. ನಗರದ ಮಹದೇವಪುರ ವಲಯ ಹಾಗೂ ಯಲಹಂಕ ವಲಯ ವ್ಯಾಪ್ತಿಯ ಕೆಲ ಪ್ರದೇಶಗಳಲ್ಲಿ ಆಗಿದ್ದ ತೊಂದರೆಗಳನ್ನು, ಬಹುತೇಕ ಕಡೆ ಸಮಸ್ಯೆಗಳು ಜೀವಂತವಾಗಿವೆ.

ಪ್ರತಿ ವರ್ಷ ಮಳೆಗಾಲದಲ್ಲೂ ಯಲಹಂಕ ವಲಯದ ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ ಆವರಣ ಕೆರೆಯಂತಾಗುತ್ತದೆ. ಕೆಲವು ದಿನಗಳಿಂದ ಸುರಿದ ಭಾರಿ ಮಳೆಯಿಂದ ಸಾಕಷ್ಟು ಸಮಸ್ಯೆ ಆಗಿತ್ತು. ಗುರುವಾರ ಮಧ್ಯಾಹ್ನವು 2 ಗಂಟೆಗೆ ಸಂಪೂರ್ಣವಾಗಿ ಹೊರಹಾಕಲಾಗಿದೆ. ಇನ್ನು ಫಾತಿಮಾ ಲೇಔಟ್ ಹಾಗೂ ಇನ್ನಿತರ ಕಡೆ ನೀರು ನುಗ್ಗಿರುವ ಮನೆಗಳ ಸಮೀಕ್ಷೆ ನಡೆಸುತ್ತಿದ್ದು, ಅರ್ಹ ಫಲಾನುಭವಿಗಳಿಗೆ ಪರಿಹಾರ ನೀಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಖದ್ದು ಮಾಹಿತಿ ನೀಡಿದ್ದಾರೆ.

ಸಾಯಿಬಾಬ ಲೇಔಟ್ನಲ್ಲಿ ಪರಿಹಾರ ಕ್ರಮ
ಬೆಂಗಳೂರಿನಲ್ಲಿ ಕೆರೆಗಳು ಹೆಚ್ಚಿರುವ ಪ್ರದೇಶ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಮಳೆ ನೀರು ನಿಂತು ಸಮಸ್ಯೆ ಆಗಿದೆ. ಹೊರಮಾವು ಉಪವಿಭಾಗದಲ್ಲಿ ಬರುವ ಸಾಯಿಬಾಬ ಲೇಔಟ್ ಹಾಗೂ ವಡ್ಡರಪಾಳ್ಯ ದಲ್ಲಿ 180ಕ್ಕೂ ಹೆಚ್ಚು ಮನೆಗಳು‌ ಬರಲಿವೆ. ರಾಜಕಾಲುವೆಯಲ್ಲಿ ಮಳೆ ನೀರಿನ ಹರಿವಿನ ಮಟ್ಟ ಹೆಚ್ಚಾಗಿದೆ.

ಬಿದ್ದ ಮಳೆ ನೀರು ಹಿಮ್ಮುಖವಾಗಿ ಚಲಿಸಿರುವ ಕಾರಣ ರಾಜಕಾಲುವೆಯ ಇಕ್ಕೆಲದಲ್ಲಿರುವ ಲೇಔಟ್ ನಲ್ಲಿ ನೀರು ತುಂಬಿರುತ್ತದೆ. ಈ ಸಂಬಂಧ ಪಾಲಿಕೆ ಅಧಿಕಾರಿಗಳು 2 ದಿನದಿಂದ ಖುದ್ದು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ನೀರು ತೆರವುಗೊಳಿಸುವ ಕೆಲಸ ಮಾಡುತ್ತಿದ್ದಾರೆ.ರಸ್ತೆಯಲ್ಲಿ ನೀರು ತೆರವು, ಸಂಚಾರಕ್ಕೆ ಅನುಕೂಲ
ಇನ್ನೂ ಇದೇ ಬಡಾವಣೆಯ 9 ರಸ್ತೆಗಳ ಪೈಕಿ 5 ರಸ್ತೆಗಳಲ್ಲಿ ಸಂಪೂರ್ಣ ಮಳೆ ನೀರನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ. ಇನ್ನುಳಿದ 4 ರಸ್ತೆಗಳಲ್ಲಿರುವ ನೀರುನ್ನು ಅಗ್ನಿಶಾಮಕ ಹಾಗೂ ಪಾಲಿಕೆ ವ್ಯವಸ್ಥೆ ಮಾಡಿಕೊಂಡಿರುವ ಪಂಪ್ ಗಳ ಮೂಲಕ ನೀರುನ್ನು ಹೊರಹಾಕಲಾಗುತ್ತಿದೆ. ನಾಳೆಯೊಳಗಾಗಿ ನೀರನ್ನು ತೆರವುಗೊಳಿಸಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.ಇನ್ನೂ ಮಳೆಯಿಂದಾಗಿ ಜಾಗರಣೆ ಮಾಡುತ್ತಿರುವ ಸ್ಥಳೀಯ ನಿವಾಸಿಗಳಿಗೆ ಬಿಬಿಎಂಪಿ ವತಿಯಿಂದ ಕುಡಿಯುವ ನೀರು, ತಿಂಡಿ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಅದಲ್ಲದೆ ಮನೆಗಳಿಗೆ ನೀರು ನುಗ್ಗಿರುವಂತಹ ನಿವಾಸಿಗಳಿಗೆ ತಂಗಲು ಹೋಟಲ್ ವ್ಯವಸ್ಥೆ ಮಾಡಲಾಗಿದೆ.

ಸದ್ಯಸಾಯಿಬಾಬ ಲೇಔಟ್ ನಲ್ಲಿ ಇರುವ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ವಲಯ ಅಧಿಕಾರಿ/ಸಿಬ್ಬಂದಿಗಳು ಸ್ಥಳದಲ್ಲಿದ್ದು, ಇರುವ ಸಮಸ್ಯೆಯನ್ನು ಬಗೆಹರಿಸುತ್ತಿದ್ದಾರೆ. ಸಾಯಿಬಾಬ ಲೇಔಟ್ ನಲ್ಲಿ ನೀರು ನುಗ್ಗಿರುವ ಮನೆಗಳ ಸಮೀಕ್ಷೆ ನಡೆಸಿ ಅರ್ಹ ಫಲಾನುಭವಿಗಳಿಗೆ ಪರಿಹಾರ ನೀಡಲಾಗುವುದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.

ಅಕ್ಟೊಬರ್ 20ರವರೆಗೆ ಭಾರೀ ಮಳೆ
ಬೆಂಗಳೂರಿನಲ್ಲಿ ಇಂದು ಸಹ ತಡರಾತ್ರಿವರೆಗೆ ಜೋರು ಮಳೆ ಆಗಲಿದೆ. ಈ ಮಹಾಮಳೆ ಅಕ್ಟೋಬರ್ 20ರವರೆಗೆ ಮುಂದುವರಿಯಲಿದೆ. ಅಲ್ಲದೇ ಅಂದು ಭಾನುವಾರ ಅತ್ಯಧಿಕ ಮಳೆ ಬರುವ ಮುನ್ಸೂಚನೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ವರದಿ ತಿಳಿಸಿದೆ.ಕಳೆದ ನಾಲ್ಕೈದು ದಿನಗಳಿಂದ ಸುರಿದ ಮಳೆಗೆ ನಗರದ ರಸ್ತೆಗಳು, ತಗ್ಗು ಪ್ರದೇಶಗಳು ಕೆರೆಗಳಾಗಿ ಮಾರ್ಪಟ್ಟಿವೆ. ರಸ್ತೆ ಅಂಡರ್‌ಪಾಸ್, ಒಳಚರಂಡಿಗಳಲ್ಲಿ ನೀರು ಉಕ್ಕಿ ಹರಿದಿವೆ. ಸಂಚಾರ ಸಮಸ್ಯೆಗಳು ಉಂಟಾಗಿವೆ. ತಗ್ಗು ಪ್ರದೇಶಗಳಲ್ಲಿ ವಾತಾವರಣ ಸಹಜ ಸ್ಥಿತಿಗೆ ಬಂದಿಲ್ಲ. ಅಲ್ಲಿನ ಜನರು ಇನ್ನೂವರೆಗೆ ಪರದಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

VS NEWS DESK
Author: VS NEWS DESK

pradeep blr