Girlfriend Swapping: ಬೆಂಗಳೂರಿಗೆ ಕಾಲಿಟ್ಟ ಗರ್ಲ್‌ಫ್ರೆಂಡ್‌ ಸ್ವಾಪಿಂಗ್‌ ದಂಧೆ, ಹೇಗೆ ನಡೀತಿದೆ ಗೊತ್ತಾ?

ಪಾಶ್ಚಿಮಾತ್ಯ ದೇಶಗಳಲ್ಲಿ ಚಾಲ್ತಿಯಲ್ಲಿರೋ ಪತ್ನಿಯರನ್ನು ಅದಲು ಬದಲು ಮಾಡಿಕೊಳ್ಳುವ ವೈಫ್‌ ಸ್ವಾಪಿಂಗ್‌ (Wife Swapping) ಎನ್ನುವ ಟ್ರೆಂಡ್‌ ಇತ್ತೀಚೆಗೆ ಭಾರತಕ್ಕೂ ಕಾಲಿಟ್ಟು ಇಲ್ಲಿನ ಸಂಸ್ಕೃತಿ ಸಂಪ್ರದಾಯಗಳನ್ನು ಅವಮಾನಿಸುವ ಕೆಲಸ ಮಾಡಿದೆ ಎನ್ನುವ ಆರೋಪವಿದೆ. ಇದೀಗ ಬೆಂಗಳೂರಿನಲ್ಲಿ ಗೆಳತಿಯರ ವಿನಿಮಯ (girlfriend swapping) ಎನ್ನುವ ಮತ್ತೊಂದು ಟ್ರೆಂಡ್‌ ಹುಟ್ಟಿಕೊಂಡಿದೆ ಎಂದು ವರದಿಯಾಗಿದೆ.

ಕೇಂದ್ರೀಯ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಈ ಗರ್ಲ್‌ಫ್ರೆಂಡ್‌ ಸ್ವಾಪಿಂಗ್‌ ದಂಧೆ ನಡೆಸುತ್ತಿದ್ದವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಈ ದಂಧೆಯನ್ನ ದೊಡ್ಡಮಟ್ಟದಲ್ಲಿ ನಡೆಸುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ದಂಧೆಯಲ್ಲಿ ಗೆಳತಿಯನ್ನು ಬೇರೊಬ್ಬ ಪುರುಷನೊಂದಿಗೆ ಹಂಚಿಕೊಳ್ಳುವ ನೀಚ ಕೃತ್ಯಕ್ಕೆ ಸಾಕ್ಷಿಯಾಗಿದೆ. ಇದನ್ನು ಇವರ ದಂಧೆಯಲ್ಲಿ ಸ್ವಿಂಗರ್‌ಗಳೆಂದು (swingers) ಕರೆಯುತ್ತಿದ್ದರು ಎಂದು ತಿಳಿದುಬಂದಿದೆ.

Bengaluru CCB Busts Girlfriend Swapping Racket Two Arrested

ಈ ದಂಧೆಯಲ್ಲಿ ಗರ್ಲ್‌ಫ್ರೆಂಡ್‌ಗಳನ್ನು ಪರಸ್ಪರ ಅಥವಾ ಬಲವಂತವಾಗಿ ವಿನಿಮಯ ಮಾಡಿಕೊಳ್ಳುವ ಮೂಲಕ ಒಬ್ಬರ ಪ್ರೇಯಸಿಯೊಂದಿಗೆ ಮತ್ತೊಬ್ಬ ಕಾಲ ಕಳೆಯುವುದು, ಅವರೊಂದಿಗೆ ಲೈಂಗಿಕ ಚಟುವಟಿಕೆ ನಡೆಸುವುದು ಒಳಗೊಂಡಿರುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ಈಗ ಬೆಳಕಿಗೆ ಬಂದಿರುವ ದಂಧೆ ಮೂಲಕ ಕೆಲವರನ್ನು ಬ್ಲಾಕ್‌ಮೇಲ್‌ ಮಾಡುವುದು, ಮಹಿಳೆಯರನ್ನು ಶೋಷಣೆ ಮಾಡುವ ಕೆಲಸವೂ ನಡೆಯುತ್ತಿದೆ ಎಂದು ವರದಿಯಾಗಿದೆ.

ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಈ ದಂಧೆ ಬಗ್ಗೆ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಈ ದೂರನ್ನು ಆಧರಿಸಿ ಸಿಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದಾಗ ಈ ದಂಧೆ ಬೆಳಕಿಗೆ ಬಂದಿದೆ. ಆರೋಪಿಗಳು ಈ ದಂಧೆಗೆ ಮಹಿಳೆಯನ್ನು ಬಳಸಿಕೊಂಡಿದ್ದು, ಆರೋಪಿಗಳು ಹಾಗೂ ಅವರ ಸಹಚರರೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಒತ್ತಾಯಿಸುತ್ತಿದ್ದರು ಎಂದು ಪೊಲೀಸರ ಮುಂದೆ ದಂಧೆಯ ಮುಖ ಬಿಚ್ಚಿಟ್ಟಿದ್ದಾರೆ.

Bengaluru CCB Busts Girlfriend Swapping Racket Two Arrested

ಇದಕ್ಕೆ ಮಹಿಳೆ ಒಪ್ಪದಿದ್ದಾಗ ಆರೋಪಿಗಳು ಆಕೆಯ ಖಾಸಗಿ ಫೋಟೋಗಳನ್ನು ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಬೇರೆ ದಾರಿಯಿಲ್ಲದೆ ಅದನ್ನು ಮಾಡಲೇಬೇಕಾದ ಪರಿಸ್ಥಿತಿಯಲ್ಲಿ ಸಿಲುಕಿಸುತ್ತಿದ್ದರು ಎಂದು ರಿವೀಲ್‌ ಮಾಡಿದ್ದಾರೆ.ಒಮ್ಮತದ ಲೈಂಗಿಕ ಚಟುವಟಿಕೆಗಳ ನೆಪದಲ್ಲಿ ಮಹಿಳೆಯರನ್ನು ಶೋಷಣೆ ಮಾಡುವ ಕೃತ್ಯಗಳು ಇತ್ತೀಚೆಗೆ ಹೆಚ್ಚಾಗಿ ನಡೆಯುತ್ತಿದ್ದು, ಮಹಿಳೆ ನೀಡಿರುವ ದೂರಿನ ಮೇರೆಗೆ ಸಿಸಿಬಿ ಅಧಿಕಾರಿಗಳು ಈ ದಂಧೆಯ ಬೆನ್ನು ಬಿದ್ದಿದ್ದಾರೆ. ಇದರಲ್ಲಿ ಇನ್ನೂ ಹಲವರು ಶಾಮೀಲಾಗಿರುವ ಮಾಹಿತಿ ಸಿಕ್ಕಿದ್ದು, ಈ ಬಗ್ಗೆಯೂ ಅವರು ತನಿಖೆ ಶುರು ಮಾಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

Bengaluru CCB Busts Girlfriend Swapping Racket Two Arrested

ಇಂತಹ ದಂಧೆಯಲ್ಲಿ ಸಿಲುಕಿರುವ ಸಂತ್ರಸ್ತರು ಅಥವಾ ಇದೇ ರೀತಿಯ ಚಟುವಟಿಕೆಗಳ ಬಗ್ಗೆ ಮಾಹಿತಿ ಹೊಂದಿರುವ ಯಾರಾದರೂ ಮುಂದೆ ಬಂದು ಧೈರ್ಯವಾಗಿ ಮಾಹಿತಿ ನೀಡುವಂತೆ ಸಿಸಿಬಿ ಅಧಿಕಾರಿಗಳು ಅಭಯ ನೀಡಿದ್ದಾರೆ. ಇಂತಹ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಅವರು ಭರವಸೆ ನೀಡಿದ್ದಾರೆ.

VS NEWS DESK
Author: VS NEWS DESK

pradeep blr

ಬಿಸಿ ಬಿಸಿ ಸುದ್ದಿ

ಕ್ರಿಕೆಟ್ ಲೈವ್ ಸ್ಕೋರ್

ಚಿನ್ನ ಮತ್ತು ಬೆಳ್ಳಿ ಬೆಲೆಗಳು