New Year 2025: ಬೆಂಗಳೂರು ಸೇರಿ ಕರ್ನಾಟಕದಾದ್ಯಂತ ಹೊಸ ವರ್ಷ 2025 ಅದ್ಧೂರಿ ಸ್ವಾಗತ

ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಹೊಸ ವರ್ಷ 2025ನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್‌ನಂತಹ ಪ್ರಮುಖ ಸ್ಥಳಗಳಲ್ಲಿ ಯುವಜನರು ಸೇರಿದಂತೆ ಅಪಾರ ಜನಸಮೂಹ ಕೇಕ್ ಕತ್ತರಿಸಿ, ಪಟಾಕಿ ಸಿಡಿಸುವುದರ ಮೂಲಕ ಹೊಸ ವರ್ಷವನ್ನು ಬರಮಾಡಿಕೊಂಡರು. ರಾಜ್ಯದ ವಿವಿಧ ನಗರಗಳಲ್ಲೂ ಹೊಸ ವರ್ಷದ ಆಚರಣೆಗಳು ಜರುಗಿದವು.

New Year 2025: ಬೆಂಗಳೂರು ಸೇರಿ ಕರ್ನಾಟಕದಾದ್ಯಂತ ಹೊಸ ವರ್ಷ 2025 ಅದ್ಧೂರಿ ಸ್ವಾಗತ
ಬೆಂಗಳೂರಿ ಸೇರಿ ಕರ್ನಾಟಕದಾದ್ಯಂತ ಹೊಸ ವರ್ಷ 2025ಕ್ಕೆ ಅದ್ಧೂರಿ ಸ್ವಾಗತ

ಬೆಂಗಳೂರು, ಜನವರಿ 01: ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ 2024ಕ್ಕೆ ಬೈ ಬೈ ಹೇಳಿದ್ದು, ಹೊಸ ವರ್ಷ 2025ಕ್ಕೆ (New Year) ಹಾಯ್ ಹಾಯ್ ಎಂದು ಹೇಳುವ ಮೂಲಕ ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ಕೇಕ್ ಕತ್ತರಿಸಿ, ಪರಸ್ಪರ ಶುಭಾಶಯ ಕೋರಿದ ಯುವ ಸಮೂಹ ಕುಣಿದು ಕುಪ್ಪಳಿಸಿದ್ದಾರೆ.

ಬೆಂಗಳೂರಿನ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಕೋರಮಂಗಲ, ಇಂದಿರಾನಗರದಲ್ಲಿ ಸಂಭ್ರಮದಿಂದ ಹೊಸ ವರ್ಷವನ್ನು ಸ್ವಾಗತ ಮಾಡಿದ್ದು, ಅದೇ ರೀತಿಯಾಗಿ ಮೈಸೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ದಾವಣಗೆರೆ, ಶಿವಮೊಗ್ಗ, ರಾಮನಗರದಲ್ಲಿ ಪಟಾಕಿ ಸಿಡಿಸಿ ಹೊಸ ವರ್ಷವನ್ನು ಯುವ ಸಮೂಹ ಸ್ವಾಗತಿಸಿದೆ.

ಇನ್ನು ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಬೀದರ್, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ ಜಿಲ್ಲೆ, ದಾವಣಗೆರೆ, ಧಾರವಾಡ, ಗದಗ, ಹಾಸನ, ಹಾವೇರಿ, ಕಲಬುರಗಿ, ಕೊಡಗು, ಕೋಲಾರ, ಕೊಪ್ಪಳ,ಮಂಡ್ಯ, ಮೈಸೂರು, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆ, ವಿಜಯನಗರ, ವಿಜಯಪುರ, ಯಾದಗಿರಿ ಜಿಲ್ಲೆಯಲ್ಲಿ ಕೂಡ ಹೊಸ ಸಂಭ್ರಮಾಚರಣೆ ಜೋರಾಗಿದೆ.

ರಾಜ್ಯದಲ್ಲಿ ನ್ಯೂ ಇಯರ್‌ ಸಂಭ್ರಮ ಹೆಚ್ಚಾಗಿ ಕಾಣುವುದು ಅಂದರೆ ಅದು ಬೆಂಗಳೂರಿನಲ್ಲಿ. ಅದರಲ್ಲೂ ಎಂಜಿ ರೋಡ್‌ನಲ್ಲಿ ಸಂಜೆಯಿಂದಲೇ ಮೋಜುಮಸ್ತಿ ಶುರುವಾಗಿದೆ. ಎಂಜಿ ರೋಡ್‌ ಹಾಗೂ ಬ್ರಿಗೇಡ್‌ ರೋಡ್‌ಗಳು ಜನರಿಂದಲೇ ಕಿಕ್ಕಿರಿದು ತುಂಬಿವೆ. ಜನಸಂದಣಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಎಂ.ಜಿ.ರಸ್ತೆಯಿಂದ ಒಪೆರಾ ಕಡೆ ತೆರಳಲು ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಕೋರಮಂಗಲದ ಪಬ್​​ ಸ್ಟ್ರೀಟ್​ಗೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಮಾಡಲಾಗಿದೆ.

ಬೆಂಗಳೂರಿನ 40 ಫ್ಲೈ ಓವರ್​ಗಳು ಬಂದ್!

ಫ್ಲೈಓವರ್‌ಗಳ ಮೇಲೆ ವ್ಹೀಲಿಂಗ್, ರ್ಯಾಶ್ ಡ್ರೈವಿಂಗ್ ಹಾಗೂ ಅಪಘಾತಗಳು ನಡೆಯುವ ಸಾಧ್ಯತೆ ಇದೆ. ಹೀಗಾಗಿ ನಗರದ ಬಹುತೇಕ ಎಲ್ಲಾ ಫ್ಲೈ ಓವರ್​ಗಳು ಬಂದ್ ಮಾಡಲಾಗಿದೆ. ಈಗಾಗಲೇ ಕೆಲವು ಫ್ಲೈಓವರ್‌ಗಳಿಗೆ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಭದ್ರತೆಗೆ 11 ಸಾವಿರ ಪೊಲೀಸರ ನಿಯೋಜನೆ ಆಗಿದ್ದು ಕೋರಮಂಗಲ ಭಾಗದಲ್ಲೇ 800 ಪೊಲೀಸರ ಭದ್ರತೆ ಕೈಗೊಂಡಿದ್ದಾರೆ. ಪೊಲೀಸರ ಜತೆ 800 ಕ್ಯಾಮರಾ ಕಣ್ಗಾವಲು ಇದೆ.

VS NEWS DESK
Author: VS NEWS DESK

pradeep blr

ಬಿಸಿ ಬಿಸಿ ಸುದ್ದಿ

ಕ್ರಿಕೆಟ್ ಲೈವ್ ಸ್ಕೋರ್

ಚಿನ್ನ ಮತ್ತು ಬೆಳ್ಳಿ ಬೆಲೆಗಳು