Search
Close this search box.

Konkan Railway: ಟಿಕೆಟ್ ರಹಿತ‌ ಪ್ರಯಾಣ; ಪ್ರಯಾಣಿಕರಿಂದ 6 ಕೋಟಿ ರೂಪಾಯಿ ದಂಡ ವಸೂಲಿ!

 

ಉಡುಪಿ:ರೈಲಿನಲ್ಲಿ ಟಿಕೆಟ್ ರಹಿತ ಪ್ರಯಾಣ ಮಾಡಿದ್ರೆ ಏನಾಗುತ್ತೆ ಅಂತೀರ? ಹಾಗಿದ್ರೆ ಈ ಸುದ್ದಿಯನ್ನ ನೀವು ಓದ್ಲೇಬೇಕು. ಹೀಗೆ ಕಳೆದ 5 ತಿಂಗಳಲ್ಲಿ ಟಿಕೆಟ್ ರಹಿತ ಪ್ರಯಾಣ ಮಾಡಿದ ಪ್ರಯಾಣಿಕರಿಂದ ಕೊಂಕಣ ರೈಲ್ವೆಯು (Konkan Railway) ಆರೂವರೆ ಕೋಟಿ ರೂಪಾಯಿಗೂ ಮಿಕ್ಕಿ ದಂಡ ವಸೂಲಿ ಮಾಡಿದೆ.

ಹೌದು, ಕಳೆದ 5 ತಿಂಗಳಿನಲ್ಲಿ 32,902 ಮಂದಿ ಟಿಕೆಟ್‌ ರಹಿತ ಪ್ರಯಾಣ ಮಾಡಿದ್ದು, ಅವರಿಂದ 6.79 ಕೋ.ರೂ. ದಂಡ ವಸೂಲು ಮಾಡಲಾಗಿದೆ ಎಂದು ‘ಉದಯವಾಣಿ’ ವರದಿ ಮಾಡಿದೆ. 2024ರ ಜನವರಿ ಯಲ್ಲಿ ಅತ್ಯಧಿಕ 9,548 ಪ್ರಯಾಣಿಕರು 2,17,97,102 ರೂಪಾಯಿ ಪಾವತಿಸಿದ್ದಾರೆ. ಸಿಕ್ಕಿಬಿದ್ದ ಪ್ರಯಾಣಿಕರು ಟಿಕೆಟ್‌ ಹಣದ ಜತೆಗೆ ಹೆಚ್ಚುವರಿ 250 ರೂಪಾಯಿ ಪಾವತಿಸಬೇಕಾಗುತ್ತದೆ.

ಜಾಹೀರಾತು
ಸಾಂದರ್ಭಿಕ ಚಿತ್ರ

ಇದನ್ನೂ ಓದಿ:
Selfie Spot: ನಮ್ಮ ಮೆಟ್ರೋದಲ್ಲಿ ಮತ್ತೆರಡು ಸೆಲ್ಫಿ ಸ್ಪಾಟ್; ಹೇಗಿದೆ ನೋಡಿ!

ಅನ್ಯ ರಾಜ್ಯದವರೇ ಹೆಚ್ಚು!
ರೈಲ್ವೇ ಪ್ಲಾಟ್‌ ಫಾರಂನೊಳಗೆ ಹೋಗಲು 10 ರೂ. ಶುಲ್ಕ ವಿಧಿಸಲಾಗುತ್ತಿದೆ. ಕೆಲವರು ಇದನ್ನೂ ಉಲ್ಲಂಘಿಸಿ ಹೋಗುತ್ತಾರೆ. ಇನ್ನು ಟಿಕೆಟ್ ರಹಿತ ಪ್ರಯಾಣ ಮಾಡುವವರಲ್ಲಿ ಬಿಹಾರ, ಮಹಾರಾಷ್ಟ್ರ, ಗೋವಾ ಸಹಿತ ಅನ್ಯ ರಾಜ್ಯದವರೇ ಹೆಚ್ಚಾಗಿದ್ದಾರೆ.

ಇದನ್ನೂ ಓದಿ:
BIFFES: ಇದೇ ತಿಂಗಳಿನಿಂದ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ!

ಸ್ಥಳದಲ್ಲಿಯೇ ದಂಡ ವಸೂಲು ಮಾಡುವ ಅಧಿಕಾರವೂ ಟಿಸಿಗಳಿಗೆ ಇರುವುದರಿಂದ ಟಿಕೆಟ್‌ ರಹಿತವಾಗಿ ಪ್ರಯಾಣ ಮಾಡುವವರು ಅಲ್ಲಿಯೇ ಹಣ ಪಾವತಿಸಿದರೆ ಸಮಸ್ಯೆಯಾಗದು. ಇಲ್ಲದಿದ್ದರೆ ಕೋರ್ಟ್‌, ಕಚೇರಿ ಎಂದು ಅಲೆಯಬೇಕಾಗುತ್ತದೆ.

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

Source link

VS NEWS DESK
Author: VS NEWS DESK

pradeep blr