Search
Close this search box.

Tiger Claw: ಆಟೋದಲ್ಲಿ ಹುಲಿ ಉಗುರನ್ನಿರಿಸಿ ವಾಹನ ಪೂಜೆ ಮಾಡಿದ ಉಡುಪಿಯ ಆಟೋ ಚಾಲಕ!

 

ಉಡುಪಿ: ಹುಲಿ ಉಗುರು ಇಟ್ಟುಕೊಂಡಿರುವ ಕಾರಣಕ್ಕೆ ಇತ್ತೀಚೆಗೆ ಬಿಗ್‌ ಬಾಸ್‌ (Big Boss) ಸ್ಪರ್ಧಿ ವರ್ತೂರು ಸಂತೋಷ್‌ (Varthur Santosh) ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದರು. ಅದಾದ ನಂತರ ಹಲವು ಮಂದಿ ಸೆಲೆಬ್ರಿಟಿಗಳು, ಗಣ್ಯರ ಮಕ್ಕಳನ್ನು ಕೂಡಾ ಪ್ರಶ್ನಿಸಲಾಗಿತ್ತು. ಈ ನಡುವೆ ಅದೆಷ್ಟೋ ಮಂದಿ ನಕಲಿ ಹುಲಿ ಉಗುರು (Tiger Claw) ಪೋಸ್ಟ್‌ ಮಾಡುತ್ತಾ ಜಾಲತಾಣದಲ್ಲಿ ಹಾಸ್ಯದ ತುಣುಕುಗಳನ್ನು ಹರಿಬಿಟ್ಟಿದ್ದರು. ಆದರೆ, ಇಲ್ಲೊಬ್ಬ ಆಟೋ ರಿಕ್ಷಾ ಚಾಲಕರು ತನ್ನ ಆಟೋ ರಿಕ್ಷಾದಲ್ಲಿ ಹುಲಿ ಉಗುರು ಪ್ರತಿಕೃತಿ ಹಾಕಿ ಗಮನ ಸೆಳೆದಿದ್ದಾರೆ.

ಜಾಹೀರಾತು

ಯಾರಿವರು?
ಇವರು ಉಡುಪಿ ಜಿಲ್ಲೆಯ ಕಟಪಾಡಿ ನಿವಾಸಿ ಜಯಕರ್ ಕುಂದರ್. ವೃತ್ತಿಯಲ್ಲಿ ಆಟೋ ಚಾಲಕ ಜೊತೆಗೆ ಸಾಮಾಜಿಕ ಕಾರ್ಯಕರ್ತನಾಗಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಜಯಕರ್ ಸುಮಾರು ಎಂಟು ವರ್ಷಗಳಿಂದ ದೀಪಾವಳಿಯ ಸಂದರ್ಭ ವಾಹನ ಪೂಜೆಯ ಜೊತೆಗೆ ವಿಭಿನ್ನವಾಗಿ ಆಟೋವನ್ನು ಸಿಂಗರಿಸುವ ಜೊತೆಗೆ ಸಮಾಜಕ್ಕೆ ಸಂದೇಶ ನೀಡುವ ಕಾರ್ಯ ಮಾಡುತ್ತಿದ್ದಾರೆ. ಈ ಬಾರಿ ʼಸೇವ್‌ ಟೈಗರ್‌ʼ ಹೆಸರಿನಲ್ಲಿ ಅವರು ವನ್ಯಜೀವಿ ಸಂರಕ್ಷಣೆಯ ಸಂದೇಶ ನೀಡಿದ್ದಾರೆ.

ಇದನ್ನೂ ಓದಿ:
Anekere Basadi: ವರಂಗವನ್ನು ಹೋಲುವ ಉಡುಪಿಯ ಇನ್ನೊಂದು ಕೆರೆ ಬಸದಿ ಇಲ್ಲಿದೆ ನೋಡಿ!

ಹೇಗಿತ್ತು ಅಲಂಕಾರ?
ಜಯಕರ್‌ ಅವರು ತಮ್ಮ ಆಟೋ ರಿಕ್ಷಾದ ಮುಂಭಾಗ ಹುಲಿಯ ಮುಖ ಮತ್ತು ಹುಲಿಯ ಉಗುರಿನ ಸ್ತಬ್ಧಚಿತ್ರ ಮಾಡಿದ್ದಾರೆ. ಇದನ್ನು ತನ್ನ ಆಟೋಗೆ ಹೊಂದಾಣಿಕೆಯಾಗುವಂತೆ ಸಿಂಗರಿಸಿದ್ದಾರೆ.

Tanisha Kuppanda ಮೇಲೆ ಒಂದಲ್ಲ ಎರಡೆರಡು ದೂರು!
ಇನ್ನಷ್ಟು ಸುದ್ದಿ…

ಇದನ್ನೂ ಓದಿ:
UPSC Results Reserve List: ಉಡುಪಿಯ ನಿವೇದಿತ ಶೆಟ್ಟಿ ಯುಪಿಎಸ್‌ಸಿ ಟಾಪರ್, ಇಲ್ಲಿದೆ ಅವರ ಸಕ್ಸಸ್‌ ಗುಟ್ಟು!

ಜೊತೆಗೆ ಹುಲಿ ಕುರಿಯ ಮಾಹಿತಿ ನೀಡಿ ದೀಪಾವಳಿ ಶುಭಾಶಯ ಕೋರಿದ್ದಾರೆ. ಸ್ವತಃ ಜಯಕರ್‌ ಅವರು ಕೂಡಾ ಕಲಾವಿದರಾಗಿದ್ದು, ಸ್ಥಳೀಯ ಸಂಗಮ್‌ ಟೀಂ ಜೊತೆಗೆ ಗುರುತಿಸಿಕೊಂಡಿದ್ದಾರೆ.

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

Source link

VS NEWS DESK
Author: VS NEWS DESK

pradeep blr

ಬಿಸಿ ಬಿಸಿ ಸುದ್ದಿ

ಕ್ರಿಕೆಟ್ ಲೈವ್ ಸ್ಕೋರ್

ಚಿನ್ನ ಮತ್ತು ಬೆಳ್ಳಿ ಬೆಲೆಗಳು