ಶಬರಿಮಲೆ ದೇವಸ್ಥಾನದ ಮುಖ್ಯ ಅರ್ಚಕರಾಗಿ ಅರುಣ ಕುಮಾರ ನಂಬೂದಿರಿ ನೇಮಕ

ಕೇರಳ: ಅರುಣ ಕುಮಾರ ನಂಬೂದಿರಿ ಇವರು ಕೇರಳದ ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಮುಖ್ಯ ಅರ್ಚಕರಾಗಿ ನೇಮಕವಾಗಿದ್ದಾರೆ. ಇವರು ಕೊಲ್ಲಂ ಶಕ್ತಿಕುಲಂಗರ ಮೂಲದವರು. ಅವರು ಈ ಹಿಂದೆ ಅಟ್ಟುಕಲ್ ದೇವಸ್ಥಾನದಲ್ಲಿ ಮುಖ್ಯ ಅರ್ಚಕರಾಗಿದ್ದರು ಮತ್ತು ಪ್ರಸ್ತುತ ಲಕ್ಷ್ಮಿ ನಟ ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದಾರೆ. ಕೋಯಿಕ್ಕೋಡ್ ತಿರುಮಂಗಲಂ ಇಲ್ಲಂ ಟಿ ವಾಸುದೇವನ್ ನಂಬೂದಿರಿ ಇದು ಅವರ ಪೂರ್ಣ ನಾಮಧೇಯವಾಗಿದೆ.

 

ಅರ್ಚಕರ ನೇಮಕಕ್ಕಾಗಿ ಉಷಾ ಪೂಜೆಯ ನಂತರ, ಬೆಳಿಗ್ಗೆ 7.30 ರ ಸುಮಾರಿಗೆ ಡ್ರಾ ನಡೆಯಿತು. ಪಂದಳಂ ಅರಮನೆಯ ಪ್ರತಿನಿಧಿಗಳಾದ ರಿಷಿಕೇಶ್ ವರ್ಮಾ ಮತ್ತು ವೈಷ್ಣವಿ ಸದಸ್ಯರನ್ನು ಆಯ್ಕೆ ಮಾಡಲು ಡ್ರಾ ಪ್ರಕ್ರಿಯೆಯನ್ನು ನಿರ್ವಹಿಸಿದರು. ಮಂಡಲಕಾಲಂನ ಆರಂಭವನ್ನು ಸೂಚಿಸುವ ನವೆಂಬರ್ 15 ರಂದು ಹೊಸ ಮುಖ್ಯ ಅರ್ಚಕರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಬಿಸಿ ಬಿಸಿ ಸುದ್ದಿ

ಕ್ರಿಕೆಟ್ ಲೈವ್ ಸ್ಕೋರ್

ಚಿನ್ನ ಮತ್ತು ಬೆಳ್ಳಿ ಬೆಲೆಗಳು