Search
Close this search box.

60 ಕಾಡಾನೆಗಳ ಅಸ್ವಾಭಾವಿಕ ಸಾವು | ತನಿಖೆಗೆ ಆದೇಶಿಸಿದ ಒಡಿಶಾ ಸರಕಾರ

ಭುವನೇಶ್ವರ : ಸುಮಾರು 60 ಕಾಡಾನೆಗಳ ಅಸ್ವಾಭಾವಿಕ ಸಾವಿನ ಕುರಿತು ಕಳವಳ ವ್ಯಕ್ತಪಡಿಸಿರುವ ಒಡಿಶಾ ಅರಣ್ಯ ಸಚಿವ ಗಣೇಶ್ ರಾಮ್ ಸಿಂಗ್ ಖುಂಟಿಯಾ ಈ ಕುರಿತು ವಿಸ್ತೃತ ತನಿಖೆಗೆ ಆದೇಶಿಸಿದ್ದಾರೆ.

ಈ ಕುರಿತಂತೆ ಸಿಂಗ್ ಖುಂಟಿಯಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಅರಣ್ಯ) ಸತ್ಯಬೃತ ಸಾಹು ಅವರಿಗೆ ಪತ್ರ ಬರೆದಿದ್ದಾರೆ ಎಂದು ರವಿವಾರ ಹೇಳಿಕೆ ತಿಳಿಸಿದೆ.

ಕಾಡಾನೆಗಳ ಸಾವಿನ ಗುರಿತು ವಿಭಾಗ ಮಟ್ಟದ ಕೂಲಂಕಷ ತನಿಖೆಗೆ ಅವರು ಆದೇಶಿಸಿದ್ದಾರೆ. ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ನಿರ್ದೇಶಿಸಿದ್ದಾರೆ. ಅಲ್ಲದೆ, ಈ ಕುರಿತಂತೆ ತಿಂಗಳ ಒಳಗೆ ವರದಿ ಸಲ್ಲಿಸುವಂತೆ ಕೂಡ ಅವರು ಸೂಚಿಸಿದ್ದಾರೆ.

ಈ ವಿಷಯ ತುಂಬಾ ಆತಂಕಕಾರಿಯಾಗಿದೆ ಎಂದು ಹೇಳಿದ ಸಚಿವರು, ಇಂತಹ ಸಾವುಗಳಿಗೆ ಕಡಿವಾಣ ಹಾಕಲು ಹೆಚ್ಚುವರಿ ಕಾಳಜಿ ಅಗತ್ಯವಾಗಿದೆ ಎಂದಿದ್ದಾರೆ. ಕಾಡಾನೆಗಳ ಅಸ್ವಾಬಾವಿಕ ಸಾವಿಗೆ ಕಡಿವಾಣ ಹಾಕಲು ರಾಜ್ಯ ಸರಕಾರ ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ತಿಳಿಸಿದ್ದಾರೆ.

‘‘ಆದರೆ, ಕಾಡಾನೆಗಳ ಸುರಕ್ಷತೆಗೆ ಕಾನೂನಾತ್ಮಕ ರಕ್ಷಣಾ ಕ್ರಮಗಳೊಂದಿಗೆ ಸುರಕ್ಷತಾ ಪರಿಸರದ ಖಾತರಿ ನೀಡುವಲ್ಲಿ ಅರಣ್ಯ ಅಧಿಕಾರಿಗಳಿಂದ ಹೆಚ್ಚಿನ ಕಾಳಜಿ ಹಾಗೂ ಪ್ರಾಮಾಣಿಕತೆಯ ಅವಶ್ಯಕತೆ ಇದೆ’’ ಎಂದು ಅವರು ಹೇಳಿದ್ದಾರೆ.

ಈ ವಿಷಯದ ಕುರಿತು ಆದ್ಯತೆ ನೀಡಬೇಕು ಹಾಗೂ ತಪ್ಪೆಸಗಿದ ಅಧಿಕಾರಿಗಳನ್ನು ವಿರುದ್ಧ ಸುಮ್ಮನೆ ಬಿಡಬಾರದು ಎಂದು ಅವರು ತಿಳಿಸಿದ್ದಾರೆ.

VS NEWS DESK
Author: VS NEWS DESK

pradeep blr

ಬಿಸಿ ಬಿಸಿ ಸುದ್ದಿ

ಕ್ರಿಕೆಟ್ ಲೈವ್ ಸ್ಕೋರ್

ಚಿನ್ನ ಮತ್ತು ಬೆಳ್ಳಿ ಬೆಲೆಗಳು