ಹುಬ್ಬಳ್ಳಿ, ನವೆಂಬರ್ 04: ರೈತರ ಹಾಗೂ ಹಿಂದುಗಳ ಆಸ್ತಿಯಲ್ಲಿ ವಕ್ಪ್ ಹೆಸರು ತೆಗೆದು ಹಾಕುವವರೆಗೂ ನಮ್ಮ ಹೋರಾಟ ನಿರಂತರವಾಗಿ ಇರುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ಸ್ಪಷ್ಟಪಡಿಸಿದರು.
ವಕ್ಪ್ ಆಸ್ತಿಯಲ್ಲಿ ರೈತರಿಗೆ ನೋಟಿಸ್ ನೀಡಿದಂತೆ ಸಿಎಂ ಆದೇಶ ವಿಚಾರವಾಗಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತರ ತುಷ್ಟೀಕರಣ ಹೆಚ್ಚಾಗಿದ್ದು,ಅಲ್ಪಸಂಖ್ಯಾತರ ತುಷ್ಟೀಕರಣವನ್ನ ಪರಮೋಚ್ಚ ಸ್ಥಾನಕ್ಕೆ ಒಯ್ಯಲಾಗಿದೆ. ರಾಜ್ಯದಿಂದ ವಿಶೇಷ ತಂಡ ವತಿಯಿಂದ ವಿಜಯಪುರಕ್ಕೆ ಬಿಜೆಪಿ ಭೇಟಿ ಮಾಡಿತ್ತು.
ಇದಕ್ಕೋ ಮೊದಲು ಅಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅಧಿಕಾರಗಳ ಸಭೆ ನಡೆಸಿದರು. ಕೇವಲ 15 ದಿನಗಳಲ್ಲಿ ವಕ್ಪ್ ಆಸ್ತಿಯಲ್ಲಿ ಹೆಸರು ನೊಂದಾಯಿಸಲು ತಾಕೀತು ಮಾಡಿದರು. ಇದರಲ್ಲಿ ಮುಖ್ಯಮಂತ್ರಿಗಳ ಮೌಖಿಕ ಸೂಚನೆ ಮೇರೆಗೆ ವಕ್ಪ್ ಆಸ್ತಿ ನೋಂದಣಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಸಚಿವರ ಇಡೀ ಸಭೆಯ ಪ್ರಕ್ರಿಯೆ ನೋಡಿದಾಗ ಇದೊಂದು ಸಿಎಂ ಸೂಚನೆ ಇದೆ ಅಂತಾ ಗೊತ್ತಾಯಿತು. ನಂತರ
ಸಾಕಷ್ಟು ಜನರಿಗೆ ನೋಟಿಸ್ ನೀಡಲಾಯಿತು. ಇದರ ವಿರುದ್ಧ ಬಿಜೆಪಿ ನಿಯೋಗ ವಿಜಯಪುರದಲ್ಲಿ ಹೋರಾಟ ನಡೆಸಲಾಯಿತು.
ರಾಜ್ಯ ಸರ್ಕಾರ ಅಂದೇ ಸಂಜೆ ವಾಪಾಸ್ ಪಡೆಯುವುದಾಗಿ ತಿಳಿಸಿತು. ಆದರೆ, ಕೇಂದ್ರ ಸರ್ಕಾರ ವಕ್ಪ್ ಕಾಯ್ದೆಗೆ ತಿದ್ದುಪಡಿ ತರುವ ಮೊದಲೇ ಸಾಕಷ್ಟು ಆಸ್ತಿ ಕಬಳಿಕೆ ಮಾಡುವ ಹುನ್ನಾರ ಆಗಿದ್ದು, ಕಾಂಗ್ರೆಸ್ ಸರ್ಕಾರ ಇದೇ ಉದ್ದೇಶದಿಂದಲೇ ಈ ರೀತಿ ಮಾಡುತ್ತಿದೆ.ಈಗ ರಾಜ್ಯ ಸರ್ಕಾರ ಮರುಪರಿಶೀಲನೆ, ಆದೇಶ ವಾಪಾಸ್ ಪಡೆಯುವ ವಿಚಾರ ಮಾತಾಡುತಿದ್ದಾರೆ. ನಾನು ಮುಖ್ಯಮಂತ್ರಿ, ಸಚಿವ ಸಂಪುಟದ ಸದಸ್ಯರಿಗೆ ಒತ್ತಾಯ ಮಾಡುವೆ, ಕೇವಲ ಆದೇಶ ವಾಪಾಸ್ ಮಾಡಿದರೆ ಸಾಲದು. ರೈತರ, ಇತರ ಆಸ್ತಿಯಲ್ಲಿ ವಕ್ಪ್ ನೊಂದಾವಣೆ ಆಗಿದೆ ಅದನ್ನ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.
ಆಸ್ತಿಯಲ್ಲಿ ಕಾಲಂ ನಂಬರ್ 9, 11 ರಲ್ಲಿ ವಕ್ಪ್ ಆಸ್ತಿ ಅಂತಾ ನಮೂದಿಸಲಾಗಿದೆ. ಅದನ್ನ ತೆಗೆದು ಹಾಕಬೇಕು, ಇದರ ಜೊತೆಗೆ ಈ ಕುರಿತು ಗೆಜೆಟ್ ಮಾಡಲಾಗಿದ್ದು, ಈ ಕುರಿತು ಗೆಜೆಟ್ ವಾಪಾಸ್ ಪಡೆಯಬೇಕು ಎಂದು ಒತ್ತಾಯ ಮಾಡಿದರು. ಈಗ ಮಹಾರಾಷ್ಟ್ರ ಚುನಾವಣೆ ಇದೆ ಅಂತಾ ವಾಪಸ್ ಪಡೆದಿರಬಹುದು ಆ ಚುನಾವಣೆ ನಂತರ ಮತ್ತೇ ಜಾರಿ ಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಇನ್ನು ಈಗ ಲ್ಯಾಂಡ್ ಜಿಹಾದ್ ನಡೆಸಲಾಗುತ್ತಿದ್ದು, ಈ ಹಿಂದೆ ಲವ್ ಜಿಹಾದಿ ನೋಡಿದ್ದವು ಎಂದ ಅವರು, ಜಮೀರ್ ಅಹ್ಮದ್ ಖಾನ್ ಸೇರಿದಂತೆ ಹಲವರು ಕರ್ನಾಟಕದ ಆಸ್ತಿ ಹೊಡೆಯುವ ಹುನ್ನಾರ ಆಗಿದೆ. ವಿಜಯಪುರದಲ್ಲಿ 12 ನೇ ಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರ ವಿರಕ್ತಮಠ ವಕ್ಪ್ ಆಸ್ತಿಗೆ ಬರೆಯುತ್ತಾರೆ. ಒಂದು ಊರಲ್ಲಿ 57 ಎಕರೆ ಜಮೀನನ್ನ ವಕ್ಪ್ ಸಮಿತಿಗೆ ಬರೆಯುತ್ತಾರೆ. ಇಡೀ ಊರಿಗೆ ಊರೇ ಆಸ್ತಿಯನ್ನ ಕಮಿಟಿಗೆ ಬರೆಯುತ್ತಾರೆ ಎಂದರು.
ಈ ಹಿಂದೆ ವಕ್ಪ್ ಸಮಿತಿ ಅಧ್ಯಕ್ಷ ಅನ್ಬರ್ ಮಾನ್ಪಡಿ ವರದಿಯನ್ನು ಜಾರಿ ಮಾಡಿ, ಅನ್ವರ್ ಮಾನ್ಪಡಿ ಅವರೇ ಹೇಳಿದ್ದಾರೆ. ಎಷ್ಟು? ಎಲ್ಲಿ? ಆಸ್ತಿ ಕಬಳಿಕೆ ಆಗಿದೆ ಅಂತಾ ಗೊತ್ತಾಗುತ್ತದೆ. ಇಂದು ಯಾರು ವಕ್ಪ್ ಆಸ್ತಿ ಕಬಳಿಕೆ ಆಗಿದೆ ಅಂತಾ ಹೊರಟಿದ್ದಾರೆ. ಅವರೇ ಕಬಳಿಕೆ ಮಾಡಿದ್ದಾರೆ, ಸಾವಿರಾರು ಎಕರೆ ಜಮೀನು ಕಬಳಿಕೆ ವಾಪಾಸ್ ಆಗಲಿ ಎಂದರು.
ವಕ್ಪ್ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡಲಾಗುತ್ತದೆ ಎಂಬ ಜಮೀರ್ ಅಹ್ಮದ್ ಖಾನ್ ಹೇಳಿಕೆ ವಿಚಾರವಾಗಿ ಸಹ ಪ್ರತಿಕ್ರಿಯೆ ನೀಡಿದ ಅವರು, ನಮಗೆ ರಾಜಕಾರಣ ಮಾಡಲು ಸಾಕಷ್ಟು ವಿಷಯ ಇವೆ. ಮೊದಲು ಅಭಿವೃದ್ಧಿ ಕಡೆ ಒತ್ತು ಕೊಡಲಿ ಮುಡಾ, ವಾಲ್ಮೀಕಿ ನಿಗಮದ ಹಗರಣ ಏನಾಯಿತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳಿದ್ದಾರೆ ಇದನ್ನೆಲ್ಲಾ ಬಿಟ್ಟು ಕೆಲಸ ಮಾಡಿ ಅಂತ ಎಂದು ತಿಳಿಸಿದರು.
Author: VS NEWS DESK
pradeep blr