Search
Close this search box.

ಜಾರ್ಖಂಡ್ ನಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿ: ಅಮಿತ್ ಶಾ

ರಾಂಚಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ರವಿವಾರ, ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರನಾಳಿಕೆ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ಸಮಾನ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೊಳಿಸುವ ಭರವಸೆ ನೀಡಿದ್ದಾರೆ. ಆದರೆ ಆದಿವಾಸಿ ಸಮುದಾಯಕ್ಕೆ ಇದರ ಜಾರಿಯ ವೇಳೆ ವಿನಾಯ್ತಿ ನೀಡುವ ಆಶ್ವಾಸನೆ ನೀಡಿದ್ದಾರೆ.

ಬಾಂಗ್ಲಾದೇಶಿ ವಲಸಿಗರು ಬುಡಕಟ್ಟು ಜನರ ಸೋಗು ಹಾಕಿ ಆದಿವಾಸಿ ಮಹಿಳೆಯರನ್ನು ವಿವಾಹವಾಗುವ ಮೂಲಕ ಆದಿವಾಸಿ ಭೂಮಿಯನ್ನು ಕಬಳಿಸುತ್ತಿದ್ದಾರೆ ಎಂದು ಅವರು ಆಪಾದಿಸಿದರು, “ಬುಡಕಟ್ಟು ಜನಸಂಖ್ಯೆ ವಲಸೆ ಕಾರಣದಿಂದ ಕ್ಷೀನಿಸುತ್ತಿದೆ. ಆದರೆ ಸೊರೆನ್ ಸರ್ಕಾರ ಇದನ್ನು ನಿರಾಕರಿಸುತ್ತಿದೆ. ನಾವು ಅಸ್ಸಾಂನಲ್ಲಿ ಇದನ್ನು ತಡೆದಿದ್ದೇವೆ ಹಾಗೂ ಇಲ್ಲೂ ಹಾಗೆ ಮಾಡುತ್ತೇವೆ ಎಂದು ಹೇಳಿದರು

“ಪ್ರತಿಯೊಬ್ಬ ವಲಸಿಗರನ್ನು ಗುರುತಿಸಿ ಗಡೀಪಾರು ಮಾಡುವ ಮೂಲಕ ಬುಡಕಟ್ಟು ಜನಾಂಗದವರಿಂದ ಅವರು ಕಬಳಿಸಿದ ಭೂಮಿಯನ್ನು ವಾಪಾಸು ಪಡೆಯುತ್ತೇವೆ” ಎಂದು ಗುಡುಗಿದರು.

ಎನ್ ಡಿಎ ಅಧಿಕಾರಕ್ಕೆ ಬಂದರೆ ಉತ್ತರಾಖಂಡದ ಮಾದರಿಯಲ್ಲಿ ಜಾರ್ಖಂಡ್ ನಲ್ಲಿ ಕೂಡಾ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುತ್ತೇವೆ. ಬುಡಕಟ್ಟು ಜನಾಂಗವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಯುಸಿಸಿ ಮಹತ್ವದ ಹೆಜ್ಜೆ. ಜಾರ್ಖಂಡ್ ನ ಅಸ್ಮಿತೆಯನ್ನು ಕಾಪಾಡುವ ಹಾಗೂ ಪ್ರಸಕ್ತ ಸರ್ಕಾರದ ಓಲೈಕೆ ರಾಜಕೀಯವನ್ನು ತಡೆಯುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಹೇಳಿದರು.

25 ಅಂಶಗಳ ಪ್ರನಾಳಿಕೆ ಸಂಕಲ್ಪ ಯಾತ್ರೆಯಲ್ಲಿ ಆದಿವಾಸಿ ಭೂಮಿಯನ್ನು ಸಂರಕ್ಷಿಸುವ ಪ್ರತಿಜ್ಞೆ, ಮೀಸಲಾತಿ ಸುಧಾರಣೆಗಳು, ನಿರುದ್ಯೋಗಿ ಯುವಕರಿಗೆ, ಮಹಿಳೆಯರಿಗೆ ಮತ್ತು ರೈತರಿಗೆ ನೆರವು ನೀಡುವುದು ಸೇರಿದೆ.

VS NEWS DESK
Author: VS NEWS DESK

pradeep blr

ಬಿಸಿ ಬಿಸಿ ಸುದ್ದಿ

ಕ್ರಿಕೆಟ್ ಲೈವ್ ಸ್ಕೋರ್

ಚಿನ್ನ ಮತ್ತು ಬೆಳ್ಳಿ ಬೆಲೆಗಳು