Search
Close this search box.

ಮೈಸೂರಿನಲ್ಲಿ ಮತ್ತೊಂದು ಗ್ಯಾಂಗ್ ರೇಪ್! ಇಬ್ಬರಿಂದ ಯುವತಿ ಮೇಲೆ ಅತ್ಯಾಚಾರ

ನಗರದ ಪಬ್ ವೊಂದರಲ್ಲಿ ಆರೋಪಿಗಳು ಹಾಗೂ ಮಡಿಕೇರಿ ಮೂಲದ ಯುವತಿ ಭೇಟಿಯಾಗಿದ್ದಾರೆ. ಬಳಿಕ ದುಷ್ಕರ್ಮಿಗಳು ಆಕೆಗೆ ಆಮಿಷವೊಡ್ಡುವ ಮೂಲಕ ಪ್ರತ್ಯೇಕ ಸ್ಥಳವೊಂದಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ

ಮೈಸೂರು: ಸಾಂಸ್ಕೃತಿಕ ನಗರಿ ಖ್ಯಾತಿಯ ಮೈಸೂರಿನಲ್ಲಿ ಮತ್ತೊಂದು ಗ್ಯಾಂಗ್ ರೇಪ್ ನಡೆದಿದೆ. ಪಬ್ ವೊಂದರಲ್ಲಿ ಭೇಟಿಯಾದ ಇಬ್ಬರು ವ್ಯಕ್ತಿಗಳು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವುದಾಗಿ ವರದಿಯಾಗಿದೆ. ಭಾನುವಾರ ಈ ಘಟನೆ ನಡೆದಿದ್ದು, ಸಂತ್ರಸ್ತೆ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಗರದ ಪಬ್ ವೊಂದರಲ್ಲಿ ಆರೋಪಿಗಳು ಹಾಗೂ ಮಡಿಕೇರಿ ಮೂಲದ ಯುವತಿ ಭೇಟಿಯಾಗಿದ್ದಾರೆ. ಬಳಿಕ ದುಷ್ಕರ್ಮಿಗಳು ಆಕೆಗೆ ಆಮಿಷವೊಡ್ಡುವ ಮೂಲಕ ಪ್ರತ್ಯೇಕ ಸ್ಥಳವೊಂದಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ವರದಿಯಲ್ಲಿ ತಿಳಿದುಬಂದಿದೆ. 2021 ರ ಆಗಸ್ಟ್ 24 ರಂದು ನಡೆದ ಗ್ಯಾಂಗ್ ರೇಪ್ ಘಟನೆ ನಂತರ ಮತ್ತೆ ಅಂತಹುದೇ ಘಟನೆ ಮರುಕಳಿಸಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

Casual Images
ಕಳೆದ ಕೆಲ ವರ್ಷಗಳ ಹಿಂದೆ ಅಂದರೆ 2021ರಲ್ಲಿ ಕಾಲೇಜು ಅವಧಿ ಮುಗಿದ ನಂತರ ಪಾರ್ಕ್ ವೊಂದರಲ್ಲಿ ಸ್ನೇಹಿತನೊಂದಿಗೆ ಕುಳಿತಿದ್ದ ಸಂತ್ರಸ್ತೆಯನ್ನು ಚಾಮುಂಡಿ ಬೆಟ್ಟದ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಏಳು ಮಂದಿ ಕಿರಾತಕರು ಸಾಮೂಹಿಕ ಗ್ಯಾಂಗ್ ರೇಪ್ ನಡೆಸಿದ್ದರು. ಅಲ್ಲದೇ ರೂ. 3 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು ಆಕೆಯ ಸ್ನೇಹಿತನನ್ನು ಮನಸೋ ಇಚ್ಚೆ ಥಳಿಸಿದ್ದರು. ಬಳಿಕ ಸಂತ್ರಸ್ತೆಯನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು.

ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ತಮಿಳುನಾಡಿನ ಏಳು ಮಂದಿಯನ್ನು ಬಂಧಿಸಿ, ಘಟನೆ ಸಂಬಂಧ 1,499 ಪುಟಗಳ ಚಾರ್ಜ್ ಶೀಟ್ ನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದು ಜನರ ಮನಸ್ಸಿನಿಂದ ಮಾಸುವ ಮುನ್ನವೇ ಮತ್ತೆ ಗ್ಯಾಂಗ್ ರೇಪ್ ಘಟನೆ ನಡೆದಿದ್ದು, ಮೈಸೂರಿನ ಜನತೆ ಆತಂಕಗೊಂಡಿದ್ದಾರೆ.

VS NEWS DESK
Author: VS NEWS DESK

pradeep blr

ಬಿಸಿ ಬಿಸಿ ಸುದ್ದಿ

ಕ್ರಿಕೆಟ್ ಲೈವ್ ಸ್ಕೋರ್

ಚಿನ್ನ ಮತ್ತು ಬೆಳ್ಳಿ ಬೆಲೆಗಳು