ದಾವಣಗೆರೆಯ ಇಮಾಮ್ ನಗರದಲ್ಲಿ ನಡೆದ ಭಯಾನಕ ಘಟನೆಯಲ್ಲಿ, 40 ಲಕ್ಷ ರೂ. ವಿಮಾ ಹಣಕ್ಕಾಗಿ ದುಗ್ಗೇಶ್ ಎಂಬಾತನನ್ನು ಅವನ ಸೋದರ ಅಳಿಯ ಗಣೇಶ್ ಮತ್ತು ಅವನ ಸ್ನೇಹಿತರು ಕೊಲೆ ಮಾಡಿದ್ದಾರೆ. ದುಗ್ಗೇಶ್ ಅವರ ಹೆಸರಿನಲ್ಲಿ 2 ಲಕ್ಷ ರೂ. ವಿಮಾ ಪಾಲಿಸಿಯನ್ನು ಮಾಡಿಸಿ, ದುಗ್ಗೇಶ್ ಸಾಯದ ಕಾರಣ ಹತ್ಯೆ ಮಾಡಿದ್ದಾರೆ.
ಮೃತ ದುರ್ಗೇಶ್ ಖಾಸಗಿ ಬಸ್ ನಿಲ್ದಾಣ ಬಳಿ ಹಣ್ಣು ಮಾರಾಟ ಮಾಡಿಕೊಂಡಿದ್ದ. ಜೊತೆಗೆ ಸಾಕಷ್ಟು ಮಧ್ಯವ್ಯಸನಿ ಕೂಡ ಆಗಿದ್ದು, ಕುಡಿದು ಕುಡಿದು ತಿವ್ರ ಅಶಕ್ತನಾಗಿದ್ದ. ಹೀಗಾಗಿ ಒಂದು ವರ್ಷದಲ್ಲಿ ಆತ ಸಾಯುತ್ತಾನೆ ಎಂದು ದುರ್ಗೇಶ್ ಹೆಸರಲ್ಲಿ ಗಣೇಶ್ 2 ಲಕ್ಷ ರೂ. ಇನ್ಶೂರೆನ್ಸ್ ಮಾಡಿಸಿದ್ದ. ದುಗ್ಗೇಶ್ ಸತ್ತರೆ 40 ಲಕ್ಷ ರೂ. ಇನ್ಶೂರೆನ್ಸ್ ಸಿಗಬೇಕಿತ್ತು. ಆದರೆ ಇನ್ಶೂರೆನ್ಸ್ ಮಾಡಿಸಿ ಒಂದು ವರ್ಷವಾದರೂ ದುಗ್ಗೇಶ್ ಸಾಯದಿದ್ದಾಗ ಗಣೇಶ್ ಕಂಗಾಲಾಗಿದ್ದಾನೆ.
ಜನವರಿಗೆ ಮತ್ತೆ ಇನ್ಶೂರೆನ್ಸ್ ರಿನಿವಲ್ ಮಾಡಬೇಕಿತ್ತು. ಸುಮ್ಮನೆ ಇನ್ಶೂರೆನ್ಸ್ ಕಟ್ಟಿದ ಎರಡು ಲಕ್ಷ ರೂ. ಹಾಳಾಗುತ್ತದೆ ಎಂದು ಕಂಗಾಲಾಗಿದ್ದ ಗಣೇಶ್, ಸ್ನೇಹಿತರ ಜೊತೆ ನಗರದ ಹೊರವಲಯದಲ್ಲಿ ದುಗ್ಗೇಶ್ ನನ್ನು ಟವೆಲ್ನಿಂದ ಉಸಿರು ಬಿಗಿದು ಹತ್ಯೆ ಮಾಡಿದ್ದಾರೆ. ಮುಖ ಮತ್ತು ದೇಹದ ಇತರೆಡೆ ಪಂಚ್ ಕೂಡ ಮಾಡಿದ್ದಾರೆ.
ಹತ್ಯೆ ನಂತರ ಲಿಂಗೇಶ್ವರ ದೇವಸ್ಥಾನ ಬಳಿ ಆರೋಪಿಗಳು ಎಸೆದು ಹೋಗಿದ್ದರು. ಮತ್ತೆ ಅನುಮಾನಗೊಂಡು ಅಪರಿಚಿತರಂತೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ದುಗ್ಗೇಶ್ ಮೃತದೇಹವನ್ನು ಆಸ್ಪತ್ರೆಯಿಂದ ಮನೆಗೆ ತಂದು ಹೊಸ ಕತೆ ಕಟ್ಟಿದ್ದಾರೆ. ಯಾರೋ ಹೊಡೆದು ಬಿಸಾಕಿ ಹೋಗಿದ್ದರು ಎಂದಿದ್ದಾರೆ. ಆದರೆ ಅನುಮಾನಗೊಂಡ ಆಜಾದ್ ನಗರ ಠಾಣಾ ಪೊಲೀಸರು ವಿಚಾರಣೆ ಮಾಡಿದ್ದು, ಈ ವೇಳೆ ಆರೋಪಿ ಗಣೇಶ್ ಸತ್ಯ ಬಾಯ್ಬಿಟ್ಟಿದ್ದಾರೆ.
Author: VS NEWS DESK
pradeep blr