ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಯುವತಿಯೊಂದಿಗೆ ಸಣ್ಣ ವಯಸ್ಸಿನ ಹುಡುಗನೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಯುವತಿಯೊಬ್ಬಳು ರಸ್ತೆಯಲ್ಲಿ ವ್ಲಾಗ್ ಮಾಡಿಕೊಂಡು ಹೋಗುವಾಗ ಸಣ್ಣ ವಯಸ್ಸಿನ ಹುಡುಗನೊಬ್ಬ ಕೆಟ್ಟದಾಗಿ ಸ್ಪರ್ಶಿಸಿದ್ದಾನೆ. ಈ ಘಟನೆಯಿಂದ ಒಂದು ಕ್ಷಣ ಯುವತಿ ಬೆಚ್ಚಿಬಿದ್ದಿದ್ದಾಳೆ.
ಹೌದು.. ಬಿಟಿಎಂ ಲೇಔಟ್‌ನಲ್ಲಿ ಸೈಕಲ್‌ನಲ್ಲಿ ತೆರಳುತ್ತಿದ್ದ ಸರಿಸುಮಾರು ಹತ್ತು ವರ್ಷದ ಬಾಲಕನೊಬ್ಬ ಯುವತಿಯ ಎದೆಯನ್ನು ಸ್ಪರ್ಶಿಸಿ ವೇಗದಲ್ಲಿ ಸೈಕಲ್ ಓಡಿಸಿಕೊಂಡು ಹೋಗಿದ್ದಾನೆ. ಇದರಿಂದ ಯವತಿ ಒಂದು ಕ್ಷಣ ಶಾಕ್ ಆಗಿದ್ದಾಳೆ. ಅಲ್ಲದೆ ಈ ದೃಶ್ಯ ಯುವತಿ ಮಾಡುತ್ತಿದ್ದ ವಿಡಿಯೋದಲ್ಲೇ ಸೆರೆಯಾಗಿದೆ.
ಯುವತಿ ನಂತರ ತನಗಾದ ಅನುಭವವನ್ನು ಹಂಚಿಕೊಂಡು ಕಣ್ಣೀರು ಹಾಕಿದ್ದಾಳೆ. ಆಕೆಯ ಬಟ್ಟೆ ಮೇಲೆ ಹುಡುಗನ ಬೆರಳಿನ ಗುರುತು ಕಂಡು ಬಂದಿದೆ. ವೀಡಿಯೋದಲ್ಲಿ ಯುವತಿ ತನಗಾದ ಕೆಟ್ಟ ಅನುಭವಕ್ಕೆ ಬೇಸರ ವ್ಯಕ್ತಪಡಿಸಿ ಕಣ್ಣೀರು ಹಾಕಿದ್ದಾಳೆ. ತನಗೆ ಈ ಸ್ಥಳ ಸುರಕ್ಷಿತವಾಗಿ ಕಾಣಿಸುತ್ತಿಲ್ಲ ಎಂದಿದ್ದಾಳೆ.
ನನ್ನ ಜೀವನದಲ್ಲಿ ಯಾವತ್ತೂ ಕೂಡ ಈ ರೀತಿ ನನಗೆ ಆಗಿಲ್ಲ. ನಾನು ವಿಡಿಯೋ ಮಾಡಿಕೊಂಡು ಹೋಗುತ್ತಿದೆ. ಆಗ ನಾನು ಹೋಗುವ ಕಡೆಗೆ ಹುಡುಗ ಸೈಕಲ್‌ನಲ್ಲಿ ಹೋಗುತ್ತಿದ್ದ. ಮುಂದೆ ಹೋಗಿ ನನ್ನನ್ನು ನೋಡಿ ಯೂ-ಟರ್ನ್ ಮಾಡಿಕೊಂಡು ಆ ಹುಡುಗ ಬಂದನು. ಬಳಿಕ ನಾನು ಮಾತನಾಡುವಂತೆ ಮಾತನಾಡಿ ಗೇಲಿ ಮಾಡಿ ನನ್ನೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ ಎಂದು ಯುವತಿ ವೀಡಿಯೋದಲ್ಲಿ ಹೇಳಿಕೊಂಡಿದ್ದಾಳೆ.
ನಂತರ ವೇಗವಾಗಿ ಹೋಗುತ್ತಿದ್ದ ಹುಡುಗನನ್ನು ಸ್ಥಳೀಯರು ಹಿಡಿದುಕೊಂಡರು. ಅವನು ಇನ್ನೂ ಚಿಕ್ಕಹುಡುಗ ಬಿಟ್ಟುಬಿಡಿ ಎಂದು ನನ್ನ ಬಳಿ ಕೇಳಿಕೊಂಡರು. ಆ ಹುಡುಗ ಕೂಡ ನಾನು ಸೈಕಲ್ ಓಡಿಸುವಾಗ ನಿಯಂತ್ರಣ ಕಳೆದುಕೊಂಡು ನಿಮ್ಮನ್ನು ತಳ್ಳಿದೆ ಎಂದು ಹೇಳಿಕೊಂಡಿದ್ದಾನೆ. ನಾನು ಮಾಡುತ್ತಿದ್ದ ವಿಡಿಯೋದಲ್ಲಿ ಆ ಹುಡುಗ ನಡೆದುಕೊಂಡ ರೀತಿ ಸ್ಪಷ್ಟವಾಗಿ ಸೆರೆಯಾಗಿದೆ. ಅದನ್ನು ನೋಡಿದಾಗಲೇ ಜನ ನನ್ನನ್ನು ನಂಬುತ್ತಾರೆ ಎಂದು ಆಕೆ ಹೇಳಿಕೊಂಡಿದ್ದಾರೆ.
ಆ ಹುಡುಗ ಇನ್ನೂ ಚಿಕ್ಕವನಾಗಿರುವ ಕಾರಣ ನಾನು ಯಾವುದೇ ದೂರು ದಾಖಲಿಸಲಿಲ್ಲ. ನನಗೆ ಆ ಹುಡುಗನ ಭವಿಷ್ಯವನ್ನು ಹಾಳು ಮಾಡಲು ಮನಸ್ಸಿಲ್ಲ ಎಂದು ಹುಡುಗಿ ವಿಡಿಯೋದಲ್ಲಿ ಕಣ್ಣೀರು ಹಾಕುತ್ತಾ ಹೇಳಿಕೊಂಡಿದ್ದಾಳೆ. ಈ ವೀಡಿಯೋಕ್ಕೆ ಹಲವಾರು ಜನ ಪ್ರತಿಕ್ರಿಯೆ ನೀಡಿದ್ದು, ಹುಡುಗಿಗೆ ದೂರು ದಾಖಲಿಸಲು ಸಲಹೆಯನ್ನು ನೀಡಿದ್ದಾರೆ.
ವೀಡಿಯೋಕ್ಕೆ ವಿಭಿನ್ನ ರೀತಿಯಲ್ಲಿ ಕಾಮೆಂಟ್‌ಗಳು ಬಂದಿವೆ. ತಪ್ಪು ಚಿಕ್ಕವರು ಮಾಡಿದರೆ ತಪ್ಪೇ ದೊಡ್ಡವರು ಮಾಡಿದರೂ ತಪ್ಪೇ.. ಅಷ್ಟಕ್ಕೂ ಇದು ಸಣ್ಣ ತಪ್ಪಲ್ಲ. ಆ ಹುಡುಗನ ಮನಸ್ಥಿತಿ ಈ ವಿಡಿಯೋದಲ್ಲಿ ಸ್ಪಷ್ಟವಾಗಿ ತೋರಿಸುತ್ತದೆ. ಆತನ ಭವಿಷ್ಯ ಈ ವೀಡಿಯೋದಲ್ಲಿ ಕಾಣಿಸುತ್ತಿದೆ. ನೀವು ಎಫ್‌ಐಆರ್ ದಾಖಲಿಸಿ ಎಂದು ನೆಟ್ಟಿಗರು ಯುವತಿಗೆ ಸಲಹೆ ನೀಡಿದ್ದಾರೆ. ಈ ವೀಡಿಯೋ ನಿಜಕ್ಕೂ ಬೆಂಗಳೂರಿಗರನ್ನು ಬೆಚ್ಚಿಬೀಳಿಸಿದೆ. ಬೆಂಗಳೂರು ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಸಣ್ಣ ವಯಸ್ಸಿನ ಹುಡುಗರು ತೋರುತ್ತಿರುವ ಇಂತಹ ವರ್ತನೆ ನಿಜಕ್ಕೂ ಆತಂಕ ಮೂಡಿಸುವಂತಿದೆ. ಸಣ್ಣ ವಯಸ್ಸಿನಲ್ಲಿ ಹುಡುಗರ ಮನಸ್ಥಿತಿ ಹೇಗಾಗಿದೆ ಎನ್ನುವುದಕ್ಕೆ ಈ ದೃಶ್ಯಯವೇ ಸಾಕ್ಷಿ. ಇಂತಹ ಘಟನೆಗಳು ಮುಂದುವರೆಯದಂತೆ ಪೊಲೀಸರು ಕ್ರಮ ಕೈಗೊಳ್ಳುವುದು ಅಗತ್ಯ.
Author: VS NEWS DESK
pradeep blr