Search
Close this search box.

ವಕ್ಫ್ ವಿವಾದಕ್ಕೆ ಬೇಸತ್ತು ರೈತ ಆತ್ಮಹತ್ಯೆ ಆರೋಪ: ಸರ್ಕಾರದ ವಿರುದ್ದ ಬಿಜೆಪಿ ಆಕ್ರೋಶ ಹಾವೇರಿಯ ರೈತನ ಆತ್ಮಹತ್ಯೆ ಕರ್ನಾಟಕದಲ್ಲಿ ವಕ್ಫ್ ಭೂ ವಿವಾದದ ತೀವ್ರತೆಯನ್ನು ಎತ್ತಿ ತೋರಿಸಿದೆ. ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ಇರುವುದರಿಂದ ರೈತರು ಆತಂಕಕ್ಕೀಡಾಗಿದ್ದಾರೆ. ಬಿಜೆಪಿ ಈ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ವಕ್ಫ್ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿದೆ

ಬೆಂಗಳೂರು, ನವೆಂಬರ್​ 07: ಕರ್ನಾಟಕದಲ್ಲಿ ವಕ್ಫ್‌ (waqf) ವಿವಾದ ದಿನದಿನಕ್ಕೂ ಹೆಚ್ಚಾಗುತ್ತಿದೆ. ರೈತರ ಪಹಣಿ, ಮಠಗಳ ಆಸ್ತಿ, ದೇಗುಲಗಳ ಆಸ್ತಿಗಳಲ್ಲಿ ವಕ್ಫ್‌ ಹೆಸರು ನಮೂದಿಸಿರುವುದು ಜನರು ಆತಂಕ್ಕೆ ಈಡುಮಾಡಿದೆ. ಇದೇ ವಕ್ಫ್ ವಿವಾದಕ್ಕೆ ಬೇಸತ್ತು ಹಾವೇರಿಯ ರೈತ ಓರ್ವ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಈ ವಿಚಾರವಾಗಿ ಸರ್ಕಾರದ ವಿರುದ್ದ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಸದ್ಯ ಈ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟ್ವೀಟ್ ಮಾಡಿದ್ದು, ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ಬಂದಿರುವುದಕ್ಕೆ ಮಾನಸಿಕವಾಗಿ ಆಘಾತಗೊಂಡು ಹಾವೇರಿ ಜಿಲ್ಲೆಯ ಹರನಗಿ ಗ್ರಾಮದ ರೈತ ರುದ್ರಪ್ಪ ಆತ್ಮಹತ್ಯೆಗೆ ಶರಣಾಗಿರುವುದು ತೀವ್ರ ಕಳವಳಕಾರಿ ಸುದ್ದಿಯಾಗಿದೆ.

ಕಾಂಗ್ರೆಸ್​ ಸರ್ಕಾರದ ಜನವಿರೋಧಿ ನೀತಿಗಳು, ತುಷ್ಟೀಕರಣ ರಾಜಕೀಯದ ಪರಾಕಾಷ್ಠೆಯ ಎಲ್ಲೆ ಮೀರಿದಂತೆ ವರ್ತಿಸುತ್ತಿರುವ ಸಚಿವರುಗಳಿಂದ ಅನ್ನದಾತರು ಹೆದರಿ ನೇಣಿಗೆ ಕೊರಳೊಡ್ಡುವ ಪರಿಸ್ಥಿತಿ ಬಂದೊದಗಿದ್ದು ದುರಂತವೇ ಸರಿ.

ಬಿವೈ ವಿಜಯೇಂದ್ರ ಟ್ವೀಟ್

 

ನಾಡಿನ ರೈತಬಂಧುಗಳು ಭಯ ಪಡುವ ಅಗತ್ಯವಿಲ್ಲ, ಬಿಜೆಪಿ ರೈತರ ಒಂದು ಅಡಿ ಜಾಗವನ್ನು ಕಿತ್ತಿಕೊಳ್ಳಲು ಬಿಡುವುದಿಲ್ಲ, ಅಲ್ಲದೇ ಈ ಬಹುದೊಡ್ಡ ಪ್ರಮಾದ ಸಂಭವಿಸಲು ಕಾರಣವಾಗಿರುವ ಕಾಂಗ್ರೆಸ್ ಸರ್ಕಾರ ರೈತನ ಸಾವಿನ ಹೊಣೆ ಹೊರಬೇಕು. ಈ ಕೂಡಲೇ ವಕ್ಫ್ ಕಾಯ್ದೆ ಹಿಂಪಡೆದು, ಮೃತ ರೈತ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.

VS NEWS DESK
Author: VS NEWS DESK

pradeep blr

ಬಿಸಿ ಬಿಸಿ ಸುದ್ದಿ

ಕ್ರಿಕೆಟ್ ಲೈವ್ ಸ್ಕೋರ್

ಚಿನ್ನ ಮತ್ತು ಬೆಳ್ಳಿ ಬೆಲೆಗಳು