Search
Close this search box.

IND vs SA: ಭಾರತ- ಆಫ್ರಿಕಾ ಟಿ20 ಕದನದಲ್ಲಿ ಯಾರದ್ದು ಮೇಲುಗೈ? ಡರ್ಬನ್‌ ಪಿಚ್ ಯಾರಿಗೆ ಸಹಕಾರಿ?

Durban pitch report: ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದು, ನವೆಂಬರ್ 8 ರಿಂದ ಆರಂಭವಾಗುವ ನಾಲ್ಕು ಟಿ20 ಪಂದ್ಯಗಳ ಸರಣಿಯ ಮೊದಲ ಪಂದ್ಯ ಡರ್ಬನ್‌ನಲ್ಲಿ ನಡೆಯಲಿದೆ. ಡರ್ಬನ್‌ನಲ್ಲಿ ಈಗಾಗಲೇ ಮಳೆ ಸುರಿಯಿತ್ತಿರುವ ಕಾರಣ ಪಿಚ್‌ನಲ್ಲಿ ತೇವಾಂಶವಿರಲಿದೆ. ಹೀಗಾಗಿ ಆರಂಭದಲ್ಲಿ ಸೀಮರ್‌ಗಳು ಲಾಭ ಪಡೆಯಲಿದ್ದಾರೆ. ಬೌಲರ್‌ಗಳಿಗೆ ಅನುಕೂಲಕರ ಪರಿಸ್ಥಿತಿಯ ಹೊರತಾಗಿಯೂ, ಬ್ಯಾಟ್ಸ್‌ಮನ್‌ಗಳು ಮೈದಾನದಲ್ಲಿ ಸಾಕಷ್ಟು ಸಮಯವನ್ನು ಕಳೆದರೆ ದೊಡ್ಡ ಸ್ಕೋರ್ ಮಾಡಬಹುದು.

IND vs SA: ಭಾರತ- ಆಫ್ರಿಕಾ ಟಿ20 ಕದನದಲ್ಲಿ ಯಾರದ್ದು ಮೇಲುಗೈ? ಡರ್ಬನ್‌ ಪಿಚ್ ಯಾರಿಗೆ ಸಹಕಾರಿ?
ಡರ್ಬನ್ ಪಿಚ್ ವರದಿ
 

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಸೋತ ನಂತರ ಭಾರತ ತಂಡ, ಇದೀಗ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದೆ. ಉಭಯ ತಂಡಗಳ ನಡುವಿನ ನಾಲ್ಕು ಟಿ20 ಪಂದ್ಯಗಳ ಸರಣಿಯು ನವೆಂಬರ್ 8 ರಿಂದ ಆರಂಭವಾಗಲಿದೆ. ಮೊದಲ ಪಂದ್ಯ ಡರ್ಬನ್‌ನಲ್ಲಿ ನಡೆಯಲಿದೆ. ಸೂರ್ಯಕುಮಾರ್ ಯಾದವ್ ಈ ಸರಣಿಯಲ್ಲಿ ಟೀಂ ಇಂಡಿಯಾ ನಾಯಕತ್ವ ವಹಿಸಲಿದ್ದು, ಯಶ್ ದಯಾಳ್, ವೈಶಾಕ್ ವಿಜಯ್ ಕುಮಾರ್ ಮತ್ತು ರಮಣದೀಪ್ ಸಿಂಗ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮುಂಬರುವ ಸರಣಿಯಲ್ಲಿ ಈ ಮೂವರು ಆಟಗಾರರು ಅಂತರಾಷ್ಟ್ರೀಯ ಪದಾರ್ಪಣೆ ಮಾಡುವ ಸಾಧ್ಯತೆಗಳಿವೆ. ಆದರೆ ಅದಕ್ಕೂ ಮೊದಲ ಟಿ20 ಪಂದ್ಯಕ್ಕೆ ಸಜ್ಜಾಗಿರುವ ಡರ್ಬನ್ ಪಿಚ್‌ ಯಾರಿಗೆ ಹೆಚ್ಚು ಸಹಕಾರಿಯಾಗಲಿದೆ ಎಂಬುದನ್ನು ತಿಳಿಯೋಣ.

ಮೇಲೆ ಹೇಳಿದಂತೆ ಸರಣಿಯ ಮೊದಲ ಪಂದ್ಯವು ಡರ್ಬನ್‌ನ ಕಿಂಗ್ಸ್‌ಮೀಡ್ ಮೈದಾನದಲ್ಲಿ ನಡೆಯಲಿದೆ. ಇದು​ ಹೆಚ್ಚು ಸ್ಕೋರಿಂಗ್ ಮೈದಾನವಾಗಿದ್ದು, ಈ ಹಿಂದೆ ನಡೆದ ಪಂದ್ಯಗಳೇ ಇದಕ್ಕೆ ಸಾಕ್ಷಿಯಾಗಿವೆ. ಇದರಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಸರಾಸರಿ ಸ್ಕೋರ್ 153 ರನ್ ಆಗಿದ್ದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಸರಾಸರಿ ಸ್ಕೋರ್ 135 ರನ್‌ಗಳಾಗಿವೆ. ಕಿಂಗ್ಸ್‌ಮೀಡ್ ಮೈದಾನದಲ್ಲಿ ಇದುವರೆಗೆ 18 ಅಂತರಾಷ್ಟ್ರೀಯ ಟಿ20 ಪಂದ್ಯಗಳು ನಡೆದಿದ್ದು, ಇದರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 9 ಬಾರಿ ಗೆದ್ದಿದ್ದರೆ, ಚೇಸಿಂಗ್ ತಂಡ 8 ಬಾರಿ ಗೆದ್ದಿದೆ. ಒಂದು ಪಂದ್ಯ ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ.

ಡರ್ಬನ್ ಪಿಚ್‌ನ ಸ್ವರೂಪವನ್ನು ನಿರ್ಣಯಿಸುವುದು ತುಂಬಾ ಕಷ್ಟ. ಕಳೆದ ವರ್ಷವೇ 191 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾವನ್ನು ಸೋಲಿಸಿತ್ತು. ಇದು ಡರ್ಬನ್‌ನಲ್ಲಿ ಬೆನ್ನಟ್ಟಿದ ಅತಿ ದೊಡ್ಡ ಸ್ಕೋರ್ ಕೂಡ ಆಗಿದೆ. ಕಿಂಗ್ಸ್‌ಮೀಡ್ ಮೈದಾನದಲ್ಲಿ ಭಾರತ ಇದುವರೆಗೆ ಕೇವಲ ಒಂದು ಟಿ20 ಪಂದ್ಯವನ್ನು ಮಾತ್ರ ಆಡಿದೆ. 17 ವರ್ಷಗಳ ಹಿಂದೆ ನಡೆದ ಆ ಪಂದ್ಯದಲ್ಲಿ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾವನ್ನು 37 ರನ್‌ಗಳಿಂದ ಸೋಲಿಸಿತ್ತು. ಆ ಪಂದ್ಯದಲ್ಲಿ ರೋಹಿತ್ ಶರ್ಮಾ ಅರ್ಧಶತಕದ ಇನ್ನಿಂಗ್ಸ್ ಆಡಿದ್ದರೆ, ಆರ್ ಪಿ ಸಿಂಗ್ ಮಾರಕ ಬೌಲಿಂಗ್ ಮಾಡಿ 4 ಓವರ್​ಗಳಲ್ಲಿ ಕೇವಲ 13 ರನ್ ನೀಡಿ 4 ವಿಕೆಟ್ ಪಡೆದಿದ್ದರು.

ಮುಖಾಮುಖಿ ವರದಿ

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಇದುವರೆಗೆ 27 ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿವೆ. ಈ ಪೈಕಿ ಭಾರತ 15ರಲ್ಲಿ ಗೆದ್ದಿದ್ದರೆ, 11ರಲ್ಲಿ ಸೋಲು ಕಂಡಿದೆ. ಎರಡು ತಂಡಗಳ ನಡುವಿನ ಕೊನೆಯ ಟಿ20 ಅಂತಾರಾಷ್ಟ್ರೀಯ ಪಂದ್ಯವು 29 ಜೂನ್ 2024 ರಂದು ಬ್ರಿಡ್ಜ್‌ಟೌನ್‌ನಲ್ಲಿ ನಡೆಯಿತು. ಆ ಪಂದ್ಯವನ್ನು ಭಾರತ 7 ರನ್‌ಗಳಿಂದ ಗೆದ್ದುಕೊಂಡಿದಲ್ಲದೆ, ಟಿ20 ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ 10 ಟಿ20 ಪಂದ್ಯಗಳನ್ನು ದಕ್ಷಿಣ ಆಫ್ರಿಕಾದಲ್ಲಿ ಆಡಿದೆ. ಈ ಪೈಕಿ ಭಾರತ 6ರಲ್ಲಿ ಗೆದ್ದಿದ್ದರೆ, 3ರಲ್ಲಿ ಸೋಲು ಕಂಡಿದೆ. ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಆ ಪಂದ್ಯ ಡರ್ಬನ್‌ನಲ್ಲಿಯೇ ನಡೆದಿತ್ತು.

VS NEWS DESK
Author: VS NEWS DESK

pradeep blr

ಬಿಸಿ ಬಿಸಿ ಸುದ್ದಿ

ಕ್ರಿಕೆಟ್ ಲೈವ್ ಸ್ಕೋರ್

ಚಿನ್ನ ಮತ್ತು ಬೆಳ್ಳಿ ಬೆಲೆಗಳು