ಹಾವೇರಿ: ರಾಜ್ಯದಲ್ಲಿ ಉಪಚುನಾವಣೆ ದಿನಾಂಕ ಸಮೀಪಿಸುತ್ತಿದೆ. ಎಲ್ಲಾ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪರವಾಗಿ ಭರ್ಜರಿಯಾಗಿ ಮತಯಾಚನೆಯಲ್ಲಿ ತೊಡಗಿದೆ. ಈ ನಡುವೆ ಶಿಗ್ಗಾವಿಯಲ್ಲಿ ಬಸವರಾಜ ಬೊಮ್ಮಾಯಿ ಅವರ ರಾಜೀನಾಮೆಯಿಂದ ತೆರವಾಗಿರುವ ವಿಧಾನಸಭಾ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕಾಂಗ್ರೆಸ್ ಶತಾಯಗತಾಯ ಗೆಲ್ಲಲೇಬೇಕೆಂದು ಪಣ ತೊಟ್ಟಿದೆ. ಈ ಹಿನ್ನೆಲೆ ಇಂದು ಮತಯಾಚನೆ ಮಾಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ ಪರವಾಗಿ ಅಬ್ಬರದ ಪ್ರಚಾರ ನಡೆಸಿದ್ದಾರೆ.
ನಾನು ಸಿಎಂ ಆಗಿದ್ರೆ ಬಡವರಿಗೆ ಮನೆ!
ಮುಂದುವರೆದು ಮಾತನಾಡಿದ ಅವರು, ಇನ್ನೂ ಎಂಟುವರೇ ವರ್ಷ ನಾವೇ ಅಧಿಕಾರದಲ್ಲಿರುತ್ತೇವೆ , ಕಾಂಗ್ರೆಸ್ ಅವಧಿಯಲ್ಲಿ ಒಂದಲ್ಲ ಒಂದು ಕಾರ್ಯಕ್ರಮ ಕೊಟ್ಟಿದ್ದೇವೆ. ಈಗ ಗ್ಯಾರಂಟಿಗಳನ್ನು ಕೋಟ್ಟಿದ್ದೇವೆ. ನವೆಂಬರ್ 10 ರಂದು ನಾನು ಮತ್ತು ಸಿಎಂ ಶಿಗ್ಗಾವಿಗೆ ಬರ್ತೇವೆ ಎಂದು ಸವಣೂರಿನಲ್ಲಿ ರೋಡ್ ಶೋ ಸಂದರ್ಭದಲ್ಲಿ ಅವರು ಹೇಳಿದರು.
ಮಹಾಯತಿ ಮೈತ್ರಿ ನಾಯಕರು ಮಹಾನ್ ಸುಳ್ಳುಗಾರರು
ಕರ್ನಾಟಕಕ್ಕೆ ಮಹಾಯತಿ ಮೈತ್ರಿ ನಾಯಕರು ಭೇಟಿ ನೀಡಲಿ
ಬಿಜೆಪಿ, ಶಿವಸೇನೆ ಮತ್ತು ಎನ್‌ಸಿಪಿ ಮುಖಂಡರಿಗೆ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡ್ತೇನೆ, ಕರ್ನಾಟಕಕ್ಕೆ ಭೇಟಿ ಮಾಡಿ ನೋಡಲಿ, ಬೇಕಿದ್ದರೆ ವಿಶೇಷ ಫ್ಲೈಟ್ ವ್ಯವಸ್ಥೆಯನ್ನೇ ಮಾಡ್ತೇನೆ ನಾವು ಗ್ಯಾರಂಟಿ ಜಾರಿಯಲ್ಲಿ ಪರ್ಫೆಕ್ಟ್ ಆಗಿದ್ದೇವೆ. ಅವರು ಸುಳ್ಳುಗಾರರು, ಮಹಾಯತಿಯವರು ಮಹಾನ್ ಸುಳ್ಳುಗಾರರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಗ್ಯಾರಂಟಿ ಯೋಜನೆಯಿಂದ 1.20 ಕೋಟಿ ಕುಟುಂಬಗಳು ಲಾಭ ಪಡೆಯುತ್ತಿವೆ. 52 ರಿಂದ 53 ಸಾವಿರ ಕೋಟಿ ಹಣವನ್ನು ಗ್ಯಾರಂಟಿಗಾಗಿ ಖರ್ಚು ಮಾಡ್ತಿದ್ದೇವೆ, ನಾವು ಇಡೀ ದೇಶಕ್ಕೆ ಮಾದರಿಯಾಗಿದ್ದೇವೆ, ನೀವು ನಿಮ್ಮ ಹದ್ದನ್ನು ದಾಟುತ್ತಿದ್ದೀರಿ, ನಾವು ನುಡಿದಂತೆ ನಡೆದಿದ್ದೇವೆ. ಸ್ವಾತಂತ್ರ್ಯ ಬಂದಾಗಿನಿಂದಲೂ ನುಡಿದಂತೆ ನಡೆದಿದ್ದೇವೆ ಎಂದರು.
Author: VS NEWS DESK
pradeep blr