ಮಳೆ.. ಮಳೆ.. ಮತ್ತೆ ಮಳೆ ಅಬ್ಬರ ಶುರುವಾಗಿದೆ. ಕಳೆದ ಕೆಲವು ದಿನಗಳಿಂದ ಹಿಂಗಾರು ಮಳೆಯ ಆರ್ಭಟ ಕಡಿಮೆ ಆಗುತ್ತಿತ್ತು. ಹೀಗಾಗಿ ಇನ್ನೇನು ಈ ವರ್ಷ ಮಳೆಗಾಲ ಮುಗಿದೇ ಹೋಯಿತು ಬಿಡು ಅಂತಾ ಕನ್ನಡಿಗರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ ಮಳೆ ಮಾತ್ರ ಮತ್ತೆ ತನ್ನ ಆರ್ಭಟ ತೋರಿಸಲು ಶುರು ಮಾಡಿದೆ. ಅದರಲ್ಲೂ ಮುಂದಿನ 48 ಗಂಟೆ ಕಾಲ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುವ ಮುನ್ಸೂಚನೆ ಸಿಕ್ಕಿದೆ!
ಕರ್ನಾಟಕ ರಾಜ್ಯದಲ್ಲಿ ಸಾಮಾನ್ಯವಾಗಿ ಹಿಂಗಾರು ಮಳೆ ಅಬ್ಬರಿಸುವುದಿಲ್ಲ. ಹೀಗಾಗಿ ನಮ್ಮ ಕನ್ನಡ ನಾಡಿಗೆ ಮುಂಗಾರು ಮಳೆಯೇ ಗಟ್ಟಿ. ಅಕಸ್ಮಾತ್ ಮುಂಗಾರು ಮಳೆ ಸುರಿಯದಿದ್ದರೆ ಬರ ಗ್ಯಾರಂಟಿ. ಆ ವರ್ಷ ಕುಡಿಯುವ ನೀರಿಗೂ ಸಮಸ್ಯೆ ಪಕ್ಕಾ ಅಂತಾರೆ ಹವಾಮಾನ ತಜ್ಞರು. ಹೀಗಿದ್ದಾಗ ದಿಢೀರ್ ಅಂತಾ ಕರ್ನಾಟಕದಲ್ಲಿ ಭರ್ಜರಿಯಾಗಿ ಹಿಂಗಾರು ಮಳೆ ಕೂಡ ಅಬ್ಬರ ತೋರಿಸುತ್ತಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ. ಹಾಗಾದ್ರೆ ಮುಂದಿನ 48 ಗಂಟೆ ಕಾಲ ಮಳೆಯ ಅಬ್ಬರ ಶುರುವಾಗುವುದು ಯಾವ ಯಾವ ಜಿಲ್ಲೆಗಳಲ್ಲಿ? ಮುಂದೆ ಓದಿ.48 ಗಂಟೆ ಕಾಲ ಭಾರಿ ಮಳೆ!
ಅಂದಹಾಗೆ ಈಗ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಪರಿಚಲನೆ ಕಾಣುತ್ತಿದ್ದು, ಮತ್ತೆ ಮಳೆ ಅಬ್ಬರ ಜೋರಾಗುವ ಮುನ್ಸೂಚನೆ ಸಿಗುತ್ತಿದೆ. ಇದೀಗ ಕೊಡಗು, ಚಿಕ್ಕಮಗಳೂರು, ಹಾಸನ, ಮೈಸೂರು, ಚಾಮರಾಜನಗರ, ಕೋಲಾರ, ಮಂಡ್ಯ, ರಾಮನಗರ ಜಿಲ್ಲೆಗಳಲ್ಲೂ ಭಾರಿ ಮಳೆ ಸುರಿಯುವ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗಾದ್ರೆ ನಮ್ಮ ಬೆಂಗಳೂರಿನ ಕಥೆ ಏನು? ಬೆಂಗಳೂರಿನಲ್ಲಿ ಕೂಡ ಮಳೆ ಸುರಿಯುತ್ತಾ?
ಬೆಂಗಳೂರು ನಗರದಲ್ಲಿ ಮಳೆ ಬೀಳುತ್ತಾ?
ಮುಂದಿನ 48 ಗಂಟೆ ಕಾಲ ದಕ್ಷಿಣ ಕರ್ನಾಟಕದ ರಾಜ್ಯಗಳು ಸೇರಿದಂತೆ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುವ ಮುನ್ಸೂಚನೆ ಇದೆ. ಹಾಗೇ ಕನ್ನಡಿಗರ ರಾಜಧಾನಿಗೂ ಮಳೆ ಕಂಟಕ ಇದ್ದು, ಕೊಡಗು, ಚಿಕ್ಕಮಗಳೂರು, ಹಾಸನ, ಮೈಸೂರು, ಚಾಮರಾಜನಗರ, ಕೋಲಾರ, ಮಂಡ್ಯ, ರಾಮನಗರ ಜಿಲ್ಲೆಗಳ ಜೊತೆಗೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕೂಡ ಮೋಡ ಕವಿದ ವಾತಾವರಣದ ಜೊತೆಗೆ ಮಳೆ ಸುರಿಯುವ ಮುನ್ಸೂಚನೆ ಇದೆ.
Author: VS NEWS DESK
pradeep blr