ಆಸ್ತಿ ಖರೀದಿದಾರರು ಹಾಗೂ ಈಗಾಗಲೇ ಆಸ್ತಿ ಖರೀದಿ ಮಾಡಿರುವವರು ಎದುರಿಸುವ ಬಹುದೊಡ್ಡ ಸಮಸ್ಯೆ ಎಂದರೆ, ಆ ಆಸ್ತಿಯ ಖಾತಾಗೆ ಸಂಬಂಧಿಸಿದ್ದು. ನಿಮ್ಮ ಆಸ್ತಿ ಯಾವ ಖಾತಾಗೆ ಸೇರಿದೆ, ಖಾತಾಗಳ ನಡುವೆ ಇರುವ ವ್ಯತ್ಯಾಸ ಏನು ಅಂತ ತಿಳಿದುಕೊಂಡರೆ ನೀವು ಸುಲಭವಾಗಿ ಈ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬಹುದು. ಇನ್ನು ಬಿ – ಖಾತಾ ಹೊಂದಿರುವುದು ಯಾವಾಗಲೂ ಡೇಂಜರ್ ಅಂತಲೇ ಪರಿಗಣಿಸಲಾಗುತ್ತೆ. ಇದಕ್ಕೆ ಕಾರಣ ಏನು, ಬಿ – ಖಾತಾ ಇದ್ದರೆ ಏನು ಮಾಡಬೇಕು ಎನ್ನುವ ವಿವರ ಇಲ್ಲಿದೆ.
ಆಸ್ತಿ ಖಾತಾದಲ್ಲಿ ಹಲವು ವಿಧಗಳಿವೆ. ಎ,ಬಿ,ಸಿ ಹಾಗೂ ಡಿ ಸೇರಿದಂತೆ ಹಲವು ಮಾದರಿಯ ಖಾತಾಗಳನ್ನು ವಿಂಗಡಿಸಲಾಗಿದೆ. ಅದರಲ್ಲಿ ಬೆಂಗಳೂರು ವ್ಯಾಪ್ತಿಯಲ್ಲಿ ಎ – ಖಾತಾ ಹಾಗೂ ಬಿ – ಖಾತಾ ಪ್ರಮುಖವಾಗಿವೆ. ಎ – ಖಾತಾ ಎಂದರೆ ಸೇಫ್ ಅಂತಲೂ ಬಿ – ಖಾತಾ ಎಂದರೆ ಸ್ವಲ್ಪ ಡೇಂಜರ್ ಅಂತಲೂ ಪರಿಗಣಿಸಲಾಗುತ್ತದೆ. ಇನ್ನು ಎ – ಖಾತಾಗೆ ಸಿಗುವ ಹಲವು ಸೌಲಭ್ಯಗಳು ಬಿ – ಖಾತಾ ಹೊಂದಿರುವವರಿಗೆ ಸಿಗುವುದಿಲ್ಲ. ಇದೊಂಥರ ಮುಂದೆಯೇ ನಿಮಗೆ ಇಷ್ಟವಾಗುವ ಸ್ವೀಟ್‌ಗಳನ್ನು ಇಟ್ಟಿದ್ದರೂ, ಅದನ್ನು ತಿನ್ನುವುದಕ್ಕೆ ಆಗಲ್ಲ. ಈ ರೀತಿ ಆಗಬಾರದು ಎಂದರೆ, ನೀವು ಕೆಲವು ನಿಯಮಗಳನ್ನು ತಿಳಿದುಕೊಂಡರೆ ಸುಲಭವಾಗಿ ಡೇಂಜರ್‌ನಿಂದ ಪಾರಾಗಬಹುದು.
ನೀವು ಆಸ್ತಿ ಖರೀದಿ ಮಾಡುವುದು ಸಣ್ಣ ವಿಚಾರವೇನಲ್ಲ. ಅದೇ ರೀತಿ ಆಸ್ತಿ ಖರೀದಿ ಮಾಡುವಾಗಲೇ ಅದು ಯಾವ ಖಾತಾದಲ್ಲಿ ಇದೆ ಎಂದು ನೋಡಿಕೊಳ್ಳುವುದು ಸಹ ತುಂಬಾ ಮುಖ್ಯ ವಿಚಾರವಾಗುತ್ತದೆ. ಸಾಮಾನ್ಯವಾಗಿ ಆಸ್ತಿಯ ದಾಖಲೆ ಪತ್ರಗಳು ಎಯಿಂದ ಇ ವರೆಗೂ ಇರುತ್ತವೆ (ಎ,ಬಿ,ಸಿ,ಡಿ,ಇ). ಇವುಗಳಲ್ಲಿ ಪ್ರಮುಖವಾಗಿ ಎ-ಖಾತಾ ಹಾಗೂ ಬಿ-ಖಾತಾಗಳು ಸೇರಿವೆ. ನೀವು ನಿಮ್ಮ ಆಸ್ತಿಯ ದಾಖಲೆ ಪತ್ರದಲ್ಲಿ ನಮೂದಿಸಿರುವ ಖಾತಾಗಳ ವಿವರವನ್ನು ತಪ್ಪದೇ ಹಾಗೂ ಮೊದಲೇ ನೋಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಆಸ್ತಿಯ ಡೇಂಜರ್ ನಿಂದ ತಪ್ಪಿಸಿಕೊಳ್ಳಬಹುದು.
ಬಿ – ಖಾತಾ ಸ್ವಲ್ಪ ಡೇಂಜರ್ ಯಾಕೆ ?
ಎ- ಖಾತಾಗೆ ಹೋಲಿಕೆ ಮಾಡಿದರೆ ಬಿ – ಖಾತಾ ಡೇಂಜರ್ ಅಂತಲೇ ಹೇಳಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಇದರಿಂದ ನಿಮಗೆ ಸರ್ಕಾರ ಅಥವಾ ವಿವಿಧ ಸಂಸ್ಥೆಗಳಿಂದ ಸಿಗುವ ಸೌಲಭ್ಯಗಳು ಸಿಗುವುದಿಲ್ಲ. ನೀವು ಸೌಲಭ್ಯ ವಂಚಿತರಾಗಬೇಕಾಗುತ್ತದೆ. ನೀವು ಬಿ – ಖಾತಾ ದಾರರಾಗಿದ್ದರೆ, ಎ- ಖಾತಾದಾರಿಗೆ ಸಿಗುವ ಸೌಲಭ್ಯಗಳು ಸಿಗುವುದಿಲ್ಲ. ಒಂದೊಮ್ಮೆ ನಿಮ್ಮ ಆಸ್ತಿಯು ಬಿ-ಖಾತಾ ದಾಖಲೆಪತ್ರಗಳ ಅಡಿಯಲ್ಲಿ ಬಂದಿದ್ದರೆ, ಇದನ್ನು ಕಾನೂನು ಬಾಹಿರ ಎಂದೇ ಗುರುತಿಸಲಾಗುತ್ತದೆ. ಈ ಕಾರಣಕ್ಕೆ ಬಿ – ಖಾತಾ ಯಾವಾಗಲೂ ಡೇಂಜರ್ ಅಂತಲೇ ಪರಿಗಣಿಸಲಾಗುತ್ತದೆ.
ಬಿ – ಖಾತಾದಲ್ಲಿ ಸರ್ಕಾರಿ ನಿಯಮಗಳ ಉಲ್ಲಂಘನೆ ಮಾಡಲಾಗಿರುತ್ತದೆ. ಮುಖ್ಯವಾಗಿ ಬಿ – ಖಾತಾಗಳಲ್ಲಿ ಅನಧಿಕೃತ ವಿನ್ಯಾಸಗಳು, ಪೂರ್ಣವಾಗದ ರಚನೆ ಹಾಗೂ ನಿಯಮ ಉಲ್ಲಂಘನೆ ಮಾಡಿರುವುದು ಸೇರಿದಂತೆ ಹಲವು ತಪ್ಪುಗಳನ್ನು ಮಾಡಿ ಕಟ್ಟಡದ ನಿರ್ಮಿಸಲಾಗಿರುತ್ತದೆ. ಅಲ್ಲದೇ ಬಿ-ಖಾತಾ ಆಸ್ತಿ ಇದ್ದರೂ ಸರ್ಕಾರದಿಂದ ಸಿಗುವ ಪರವಾನಿಗೆ, ಬ್ಯಾಂಕ್‌ಗಳಿಂದ ಸಿಗುವ ಸಾಲಗಳಿಗೆ ಅರ್ಜಿ ಸಲ್ಲಿಸಲು ನಿಮಗೆ ಅವಕಾಶ ಇರುವುದಿಲ್ಲ. ಇನ್ನು ಅತ್ಯಂತ ಮುಖ್ಯವಾಗಿ ತುರ್ತು ಸಂದರ್ಭದಲ್ಲಿ ಆಸ್ತಿ ಮಾಲೀಕತ್ವವನ್ನು ಮರುಮಾರಾಟ ಮಾಡುವುಕ್ಕೂ ಇಲ್ಲವೇ ವರ್ಗಾವಣೆ ಮಾಡುವುದಕ್ಕೆ ಸಂಬಂಧಪಟ್ಟಂತೆ ಯಾವುದೇ ಅಧಿಕೃತ ಹಕ್ಕು ಬಿ – ಖಾತೆದಾರರಿಗೆ ಇರುವುದಿಲ್ಲ ಎನ್ನುವುದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ನಿಯಮವಾಗಿದೆ.
ಬಿ – ಖಾತಾ ಸಮಸ್ಯೆ ತಪ್ಪಿಸಲು ಈ ರೀತಿ ಮಾಡಿ
ಬಿ – ಖಾತಾ ಹೊಂದಿದ್ದರೆ, ನಿಮ್ಮ ಆಸ್ತಿ ಪ್ರಯೋಜನಕ್ಕೆ ಇಲ್ಲ ಅಂತಲೇ ಹೇಳಲಾಗುತ್ತದೆ. ಆದರೆ, ಈ ಆಸ್ತಿಯಿಂದ ನೀವು ತೊಂದರೆ ಆಗುತ್ತದೆ ಎಂದು ಭಾವಿಸುವ ಅವಶ್ಯಕತೆಯೂ ಇಲ್ಲ. ಬಿ – ಖಾತಾದ ಕೆಲವು ನಿರ್ದಿಷ್ಟ ಸಮಸ್ಯೆಗಳಿಗೆ ನೀವು ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಒಂದೊಮ್ಮೆ ಈಗಾಗಲೇ ನೀವು ಬಿ – ಖಾತಾದ ಅಡಿಯಲ್ಲಿ ಆಸ್ತಿಯನ್ನು ಖರೀದಿಸಿದ್ದೀರಿ ಇಲ್ಲವೇ ಹೊಂದಿದ್ದೀರಿ ಎಂದಾದರೆ, ಮೊದಲು ಅದನ್ನು ಎ-ಖಾತಾಗೆ ಬದಲಾಯಿಸಿ(ಪರಿವರ್ತನೆ) ಕೊಳ್ಳಬೇಕು. ಒಂದೊಮ್ಮೆ ನೀವು ಎ-ಖಾತಾಗೆ ಪರಿವರ್ತಿಸಿಕೊಳ್ಳದಿದ್ದರೆ ಸಮಸ್ಯೆ ಆಗಲಿದೆ. ರಾಜ್ಯ ಸರ್ಕಾರ ಹಾಗೂ ವಿವಿಧ ಸಂಸ್ಥೆಗಳಿಂದ ಸಿಗುವ ಪ್ರಮುಖ ಸೌಲಭ್ಯವು ನಿಮಗೆ ಸಿಗುವುದಿಲ್ಲ.
Author: VS NEWS DESK
pradeep blr