ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರು ಸದ್ಯ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದಾರೆ. ದರ್ಶನ್ಗೆ ಜಾಮೀನು ಕೊಡಲಿಸಲು ಅವರ ಪತ್ನಿ ವಿಜಯಲಕ್ಷ್ಮಿ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಈ ವೇಳೆ ನಟ ದರ್ಶನ್ ಜೈಲಿನಿಂದ ಯಾವಾಗ ಹೊರಬರುತ್ತಾರೆ ಎನ್ನುವ ಬಗ್ಗೆ ಹಲವಾರು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದರು. ಈಗ ಯಾವ ಜ್ಯೋತಿಷಿ ನುಡಿದ ಭವಿಷ್ಯವಾಣಿ ನಿಜವಾಗಿದೆ ಎನ್ನುವ ಲೆಕ್ಕಾಚಾರಗಳು ಶುರುವಾಗಿದೆ. ನಟ ದರ್ಶನ್ ವಿಚಾರದಲ್ಲಿ ಕೋಡಿಶ್ರೀ (ಅರಸೀಕೆರೆ ಕೋಡಿಮಠ ಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ) ನುಡಿದ ಭವಿಷ್ಯ ನಿಜವಾಗಿದೆ.
ಹೌದು… ದರ್ಶನ್ ಜೈಲಿನಿಂದ ಹೊರಬರುವುದು ತುಂಬಾ ಕಠಿಣವಾಗಿತ್ತು. ಎಷ್ಟೇ ಪ್ರಯತ್ನ ಪಟ್ಟರೂ ದರ್ಶನ್ಗೆ ಜಾಮೀನು ಸಿಗುವುದು ಸುಲಭವಾಗಿರಲಿಲ್ಲ. ಹೀಗಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ತನ್ನ ಗಂಡನನ್ನು ಜೈಲಿನಿಂದ ಬಿಡಿಸಿಕೊಂಡು ಬರಲು ಮಾಡಿದ ಪ್ರಯತ್ನ ಒಂದೆರೆಡಲ್ಲ. ಬೇಡಿಕೊಳ್ಳದ ದೇವರುಗಳಿಲ್ಲ. ಪೂಜೆ, ಹೋಮ, ಹವನ ಮಾಡಿಸುವುದು ಮಾತ್ರವಲ್ಲದೆ ಹಲವಾರು ಪ್ರಸಿದ್ಧ ಹಾಗೂ ಶಕ್ತಿ ದೇವಸ್ಥಾನಗಳಿಗೆ ವಿಜಯಲಕ್ಷ್ಮಿ ಭೇಟಿ ನೀಡಿ ದರ್ಶನ್ ಬಿಡುಗಡೆಗಾಗಿ ಪ್ರಾರ್ಥಿಸಿದ್ದರು. ಅಲ್ಲದೆ ಅವರ ಕುಟುಂಬಸ್ಥರು, ಆಪ್ತರು, ಅಭಿಮಾನಿಗಳೂ ಕೂಡ ದರ್ಶನ್ ಬಹುಬೇಗ ಜೈಲಿನಿಂದ ಹೊರಬರಲೆಂದು ಹಲವಾರು ದೇವರಿಗೆ ಪೂಜೆ ಮಾಡಿಸಿದ್ದರು.
ಆದರೂ ಕೂಡ ದರ್ಶನ್ ಜೈಲಿನಿಂದ ಹೊರಬರುವ ಲಕ್ಷಣಗಳು ಕಾಣಿಸಲಿಲ್ಲ. ಹೀಗಾಗಿ ದರ್ಶನ್ ಅವರ ಜಾತಕ ನೋಡಿದಾಗ ದರ್ಶನ್ಗೆ ಶನಿ ಕಾಟವಿರುವುದು ಗೊತ್ತಾಗಿತ್ತು. ಅಲ್ಲದೆ ದರ್ಶನ್ ಜಾತಕದಲ್ಲಿ ಗ್ರಹಗತಿಗಳು ಸರಿಯಾಗಿ ಇಲ್ಲದೇ ಇರುವುದರಿಂದ ಪತ್ನಿ ವಿಜಯಲಕ್ಷ್ಮೀ ಇದಕ್ಕಾಗಿ ಗ್ರಹಗಳ ಶಾಂತಿ ಹೋಮ ಕೂಡ ಮಾಡಿಸಿದ್ದರು. ಆದರೆ ದರ್ಶನ್ ಜೈಲಿನಿಂದ ಯಾವಾಗ ಹೊರಬರುತ್ತಾರೆ ಎನ್ನುವ ಪ್ರಶ್ನೆಗೆ ಯಾರಿಗೂ ಉತ್ತರ ಗೊತ್ತಿರಲಿಲ್ಲ.
ಜಾಮೀನು ಅರ್ಜಿ ಪದೇ ಪದೇ ತಿರಸ್ಕರಿಸಲ್ಪಡುತ್ತಿತ್ತು. ಹೀಗಾಗಿ ಅವರ ಕುಟುಂಬಸ್ಥರು, ಆಪ್ತರು ಹಾಗೂ ಅಭಿಮಾನಿಗಳಿಗೆ ದರ್ಶನ್ ಯಾವಾಗ ಜೈಲಿನಿಂದ ಹೊರಬರುತ್ತಾರೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿ ಕಾಡತೊಡಗಿತ್ತು. ಈ ವೇಳೆ ಹಲವಾರು ಜ್ಯೋತಿಷಿಗಳು ದರ್ಶನ್ ಬಗ್ಗೆ ಭವಿಷ್ಯ ನುಡಿದಿದ್ದರು. ಆ ಪೈಕಿ ಕೋಡಿಶ್ರೀ ಕೂಡ ಒಬ್ಬರು. ಹಾಗಾದರೆ ಕೋಡಿಶ್ರೀಗಳು ದರ್ಶನ್ ಬಗ್ಗೆ ಹೇಳಿದ್ದೇನು?
ದರ್ಶನ್ ವಿಚಾರದಲ್ಲಿ ನಿಜವಾಯ್ತು ಕೋಡಿಶ್ರೀ ನುಡಿದ ಭವಿಷ್ಯ
ಅಕ್ಟೋಬರ್ 15ರಂದು ಚಿಕ್ಕಬಳ್ಳಾಪುರ ನಗರದ ಭಕ್ತರೊಬ್ಬರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೋಡಿಮಠದ ಶ್ರೀಗಳು ನಟ ದರ್ಶನ್ ಬಗ್ಗೆ ಮಾರ್ಮಿಕವಾಗಿ ಭವಿಷ್ಯವನ್ನು ನುಡಿದಿದ್ದರು. ಮಾಡಿದ ಪಾಪವನ್ನು ಅನುಭವಿಸಲೇಬೇಕು ಎಂದು ಶ್ರೀಗಳು ಅಂದು ಹೇಳಿದ್ದರು.
ದರ್ಶನ್ ಬಗ್ಗೆ ಪರೋಕ್ಷವಾಗಿ ಮಾತನಾಡಿದ ಕೋಡಿಶ್ರೀಗಳು, ”ಪುಣ್ಯದ ಕೆಲಸ ಮಾಡಲು ಭಯ ಪಡಬಾರದು. ಆದರೆ ಜನರು ಅದಕ್ಕೆ ಭಯವನ್ನು ಪಡುತ್ತಿದ್ದಾರೆ. ಪಾಪದ ಪಾಷಣ ಕಳೆಯಬೇಕಿದೆ. ಮಾಡಿದ ಕರ್ಮ ಫಲವತ್ತಾದರೆ ಯಾರೇನು ಮಾಡುವರು. ಪಾಪದ ಕೆಲಸ ಮಾಡುವುದಕ್ಕೆ ಹೆದರಬೇಕಿತ್ತು” ಎಂದು ಶ್ರೀಗಳು ಹೇಳಿದ್ದರು.
ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ನೀಡಿದ ಹೇಳಿಕೆ ನಿಜವಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಕೋಡಿಶ್ರೀಗಳು ಹೇಳಿದಂತೆ ಪಾಪಮಾಡಿದವರು ಶಿಕ್ಷೆ ಅನುಭವಿಸುತ್ತಾರೆ, ಹಾಗೇ ದರ್ಶನ್ ತಪ್ಪು ಮಾಡಿಲ್ಲ ಹೀಗಾಗಿ ಅವರು ಜೈಲಿನಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಕೋಡಿಶ್ರೀಗಳು ಹೇಳುವ ಭವಿಷ್ಯವಾಣಿಯ ಮೇಲಿನ ನಂಬಿಕೆ ಭಕ್ತರಲ್ಲಿ ಮತ್ತಷ್ಟು ಹೆಚ್ಚಾಗಿದೆ.
Author: VS NEWS DESK
pradeep blr