Search
Close this search box.

E-Khata: ಇ-ಖಾತಾ ಈಗ ಮತ್ತಷ್ಟು ಸುಲಭ, ಹಲವು ಸಮಸ್ಯೆ ಇತ್ಯರ್ಥ

ಬೆಂಗಳೂರು, ನವೆಂಬರ್ 25: ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಹೊಸ ಇ-ಖಾತಾ ವ್ಯವಸ್ಥೆ ಭೂ ಮಾಲೀಕರು, ಆಸ್ತಿ ಖರೀದಿ ಮತ್ತು ಮಾರಾಟಗಾರರಲ್ಲಿ ಅನೇಕ ಗೊಂದಲವನ್ನು ಹುಟ್ಟುಹಾಕಿದೆ. ಬೆಂಗಳೂರು ನಗರದಲ್ಲಿ ಬಿಲ್ಡರ್‌ಗಳು ಮತ್ತು ಖರೀದಿದಾರರು ಆಸ್ತಿ ನೋಂದಣಿ ಕಡಿಮೆಗೊಳಿಸಿದ್ದು, ನೋಂದಣಿ ಸಂಖ್ಯೆ ಕುಸಿತವಾಗುತ್ತಿದೆ. ಇ-ಖಾತಾ ಬಗ್ಗೆ ಇರುವ ಗೊಂದಲ ನಿವಾರಿಸಲು ಹಲವು ಪ್ರಯತ್ನಗಳನ್ನು ಮಾಡಲಾಗುತ್ತಿದೆ.

ಬೆಂಗಳೂರು ನಗರದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಕಂದಾಯ ಇಲಾಖೆ, ಗ್ರಾಮೀಣ ಅಭಿವೃದ್ಧಿ ಇಲಾಖೆ, ನಗರಾಭಿವೃದ್ಧಿ ಇಲಾಖೆಗಳು ಜಂಟಿಯಾಗಿ ಹಲವು ಕ್ರಮಗಳನ್ನು ಕೈಗೊಂಡು ಇ-ಖಾತಾ ಬಗೆಗಿನ ಗೊಂದಲವನ್ನು ನಿವಾರಿಸುತ್ತಿವೆ. ಜನರಿಗೆ ಸಹಾಯಕವಾಗಲು ಅಪ್‌ಡೇಟ್‌ ಆಗಿರುವ ಸಹಾಯವಾಣಿ ಸಂಖ್ಯೆಯನ್ನು ಸಹ ಬಿಡುಗಡೆ ಮಾಡಲಾಗಿದೆ.

ಬೆಂಗಳೂರು ನಗರದ 8 ವಿಭಾಗದಲ್ಲಿ ಯಾರಿಗೆ ಕರೆ ಮಾಡಬೇಕು ಎಂದು ಬಿಬಿಎಂಪಿ ಮಾಹಿತಿಯನ್ನು ನೀಡಿದೆ. ಅಧಿಕಾರಿ/ ಸಿಬ್ಬಂದಿಗಳ ದೂರವಾಣಿ ಸಂಖ್ಯೆಯನ್ನು ನೀಡಿದೆ. ಮೊದಲು ಆಸ್ತಿಗಳ ಖರೀದಿ/ ಮಾರಾಟ ಮಾಡುವವರಿಗೆ ಆದ್ಯತೆ ನೀಡಿ, ಉಳಿದ ಜನರು ನಿಧಾನವಾಗಿ ಇ-ಖಾತಾ ಪಡೆಯಿರಿ ಎಂದು ಬಿಬಿಎಂಪಿ ಮನವಿ ಮಾಡಿದೆ

ಸಹಾಯವಾಣಿ ಸಂಖ್ಯೆಗಳು: ಇ-ಖಾತಾ ಹೆಲ್ಪ್ ಡೆಸ್ಕ್ ತೆರೆಯಾಗಿದ್ದು, ಜನರಿಗೆ ಸಹಾಯ ಮಾಡಲು ಪಾಲಿಕೆ ಮುಂದಾಗಿದೆ. ಬೊಮ್ಮನಹಳ್ಳಿ ವಲಯದಲ್ಲಿನ ಸಮಸ್ಯೆಗಳಿಗಾಗಿ 9480683182, 9480683712, 9480683695 ಮತ್ತು 9480683197 ಸಂಖ್ಯೆಗೆ ಕರೆ ಮಾಡಬಹುದು.

ದಾಸರಹಳ್ಳಿ ವಲಯದ ಸಮಸ್ಯೆಗಳಿದ್ದರೆ 9480683710, 9480683711 ಮತ್ತು 9480683197 ಸಂಖ್ಯೆಗೆ ಸಂಪರ್ಕಿಸಬಹುದು.

ಮಹದೇವಪುರ ವಲಯದ ಸಮಸ್ಯೆಗಳಿಗೆ 9480683718, 9480683720, 9480683205, 9480683520 ಮತ್ತು 9480683512 ಸಂಖ್ಯೆಗೆ ಕರೆ ಮಾಡಿ.

ಬೆಂಗಳೂರು ಪೂರ್ವ ವಿಭಾಗ 9480683203, 9480683716 ಮತ್ತು 9480683512 ಸಂಖ್ಯೆಗೆ ಕರೆ ಮಾಡಿ.

ಬೆಂಗಳೂರು ಪಶ್ಚಿಮ ವಿಭಾಗದ ಸಮಸ್ಯೆಗಳಿಗೆ 9480683653, 9480683204, 9480683524, 9480683651 ಸಂಖ್ಯೆಗೆ ಕರೆ ಮಾಡಬಹುದು.

ಬೆಂಗಳೂರು ದಕ್ಷಿಣ ವಿಭಾಗದಲ್ಲಿ 9480683638, 9480683179 ಮತ್ತು 9480683521 ಹಾಗೂ 9480683648 ಸಹಾಯವಾಣಿ ಸಂಖ್ಯೆಗಳು.

ಆರ್. ಆರ್. ನಗರ ವ್ಯಾಪ್ತಿಯಲ್ಲಿ 9480683576, 9480683198, 9480683528 ಮತ್ತು 9480683648 ಸಂಖ್ಯೆಗಳಿಗೆ ಕರೆ ಮಾಡಿ.

ಯಲಹಂಕ ವಿಭಾಗದಲ್ಲಿ ಸಮಸ್ಯೆಗಳು ಆದರೆ 9480683645, 9480683516, 9480683649 ಮತ್ತು 9480683651 ಸಂಖ್ಯೆ ಕರೆ ಮಾಡಿ ಮಾಹಿತಿ ಪಡೆಯಿರಿ.

ಇನ್ನೊಂದು ಸಮಸ್ಯೆ ಇತ್ಯರ್ಥ: ಇ-ಖಾತಾ ಪಡೆದುಕೊಳ್ಳಲು ಇದ್ದ ಇನ್ನೊಂದು ಸಮಸ್ಯೆಯನ್ನು ಸರ್ಕಾರ ಪರಿಹರಿಸಿದೆ. ಪರಿವರ್ತನೆ ಆಗಿ ಅಭಿವೃದ್ಧಿಗೊಳ್ಳದ ಭೂಮಿ ಪಹಣಿ ಮೇಲೇ ನೋಂದಣಿ ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ಜಮೀನು ಭೂಪರಿವರ್ತಿತ, ಆದರೆ ಅಭಿವೃದ್ಧಿಯಾಗದೇ ಇರುವ (converted but un developed) ಜಮೀನೆಂದು ಪರಿಗಣಿಸಿ ನೋಂದಣಿಗೆ ಅವಕಾಶವನ್ನು ಮಾಡಿಕೊಡಲಾಗಿದೆ.

ಕೃಷಿ ಭೂಮಿಯಿಂದ ಭೂ ಬಳಕೆ ಪರಿವರ್ತನೆಯಾಗಿ ಅಭಿವೃದ್ಧಿಗೊಳ್ಳದ ಭೂಮಿಯನ್ನು ಆರ್‌ಟಿಸಿ ಆಧಾರದ ಮೇಲೆಯೇ ನೋಂದಣಿ ಮಾಡಲು ಕಂದಾಯ ಇಲಾಖೆ ಅನುಕೂಲ ಕಲ್ಪಿಸಿದೆ. ಇದರಿಂದಾಗಿ ಆಸ್ತಿ ನೋಂದಣಿಗೆ ಇ-ಖಾತಾ ಕಡ್ಡಾಯ ಗೊಳಿಸಿದ ಬಳಿಕ ಉಂಟಾಗಿದ್ದ ಮತ್ತೊಂದು ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಕಂದಾಯ ಇಲಾಖೆ, ಗ್ರಾಮೀಣ ಅಭಿವೃದ್ಧಿ ಇಲಾಖೆ ಹಾಗೂ ನಗರಾಭಿವೃದ್ಧಿ ಪೌರಾಡಳಿತ ಇಲಾಖೆಗಳು ಒಟ್ಟಾಗಿ ಭೂ ಪರಿವರ್ತನೆ ಆಗಿದ್ದೂ ಅಭಿವೃದ್ಧಿಗೊಳ್ಳದ ಆಸ್ತಿಯನ್ನು ಪಹಣಿ ಆಧಾರದ ಮೇಲೆ ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿವೆ.

ಭೂ ಪರಿವರ್ತನೆ ಬಳಿಕ ಭೂ ಪರಿವರ್ತಿತ ಜಮೀನುಗಳ ಪಹಣಿಗಳಿಗೆ ಭೂ ಕಂದಾಯ ಕಡಿತಗೊಳಿಸಲಾಗುತ್ತದೆ. ಹೀಗಾಗಿ ಈ ಆಸ್ತಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳು ಅಥವಾ ನಗರಾಭಿವೃದ್ಧಿ ಪ್ರಾಧಿಕಾರಗಳು ಇ-ಖಾತಾ ನೀಡಬೇಕು. ಆದರೆ ಭೂಪರಿವರ್ತನೆ ನಂತರ ಇ-ಖಾತಾ ನೀಡಲು ಯೋಜನಾ ಪ್ರಾಧಿಕಾರದಿಂದ ನಕ್ಷೆ ಮಂಜೂರಾತಿ ಪಡೆದು ನಕ್ಷೆ ಪ್ರಕಾರ ಭೂಮಿಯನ್ನು ವಸತಿ ಬಡಾವಣೆ ಅಥವಾ ಇತರೆ ಉದ್ದೇಶಕ್ಕೆ ಅಭಿವೃದ್ಧಿಪಡಿಸಬೇಕು. ಕೆಲವು ಪ್ರಕರಣದಲ್ಲಿ ಅಭಿವೃದ್ಧಿಪಡಿಸದೆಯೇ ಮಾರಾಟ ಮಾಡಲು ಮಾಲೀಕರು ಮುಂದಾಗಿದ್ದು, ಅವರಿಗೆ ಸಮಸ್ಯೆಯಾಗುವುದನ್ನು ತಪ್ಪಿಸಲು ಭೂಪರಿವರ್ತಿತ, ಆದರೆ ಅಭಿವೃದ್ಧಿಯಾಗದೇ ಇರುವ ಜಮೀನು ಎಂದು ಪರಿಗಣಿಸಿ ನೋಂದಣಿಗೆ ಅವಕಾಶ ನೀಡಲಾಗಿದೆ.

VS NEWS DESK
Author: VS NEWS DESK

pradeep blr

ಬಿಸಿ ಬಿಸಿ ಸುದ್ದಿ

ಕ್ರಿಕೆಟ್ ಲೈವ್ ಸ್ಕೋರ್

ಚಿನ್ನ ಮತ್ತು ಬೆಳ್ಳಿ ಬೆಲೆಗಳು