ಪಾವಗಡ ತಾಲ್ಲೂಕಿನ ಕೋಣನಕುರಿಕೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ನೀಡಿದ ಕಡಲೆ ಚಿಕ್ಕಿಯನ್ನು ತಿಂದು 46 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ವಾಂತಿ ಮತ್ತು ಅತಿಸಾರದಿಂದ ಬಳಲುತ್ತಿರುವ ಮಕ್ಕಳಿಗೆ ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ತಹಶೀಲ್ದಾರ್ ಮತ್ತು ಬಿಇಒ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ತುಮಕೂರು, ನವೆಂಬರ್ 29: ಕಡಲೆ ಚಿಕ್ಕಿ ತಿಂದು 46 ವಿದ್ಯಾರ್ಥಿಗಳಿಗೆ (Students) ವಾಂತಿಯಾಗಿ ಅಸ್ವಸ್ಥಗೊಂಡಿರುವಂತಹ ಘಟನೆ ಜಿಲ್ಲೆಯ ಪಾವಗಡ ತಾಲೂಕಿನ ಕೋಣನಕುರಿಕೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಮಧ್ಯಾಹ್ನ ಬಿಸಿಯೂಟ ವೇಳೆ ನೀಡಿದ್ದ ಚಿಕ್ಕಿ ತಿಂದು ಅಸ್ವಸ್ಥರಾಗಿದ್ದಾರೆ. ಕೊಡಲೇ ಅಸ್ವಸ್ಥ ಮಕ್ಕಳಿಗೆ ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಯಾವುದೇ ಪ್ರಾಣಾಪಾಯವಾಗಿಲ್ಲ. ಸ್ಥಳಕ್ಕೆ ತಹಶೀಲ್ದಾರ್ ವರದರಾಜು, ಬಿಇಒ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಫುಡ್ ಪಾಯಿಸನ್ನಿಂದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಾಂತಿ-ಭೇದಿ
ಬೀದರ್: ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಕಲ್ಲೂರು ಗ್ರಾಮದ ಬಳಿ ಮೂರು ದಶಕದಷ್ಟು ಹಳೆದಾದ ಬಸವತೀರ್ಥ ಮಠವಿದೆ. ಈ ಮಠದ ಅಡಿಯಲ್ಲಿಯೇ ಬಸವತೀರ್ಥ ವಿದ್ಯಾಪೀಠ ಶಾಲೆ ನಡೆಯುತ್ತಿದೆ. 1 ರಿಂದ 10ನೇ ತರಗತಿಯ ವೆರೆಗೆ ಐನೂರಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಗ್ರಾಮೀಣ ಭಾಗದ ಮಕ್ಕಳು ಈ ವಸತಿ ಶಾಲೆಯಲ್ಲಿ ಇನ್ನೂರಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಗುರುಕುಲದ ವಸತಿ ಶಾಲೆಯಲ್ಲಿ ರಾತ್ರಿ ಉಳಿದಿದ್ದ ಅನ್ನವನ್ನ ಮುಂಜಾನೆ ಒಗ್ಗರಣೆ ಹಾಕಿ ಮಕ್ಕಳಿಗೆ ಬೆಳಗಿನ ತಿಂಡಿ ಕೊಟ್ಟಿದ್ದಾರೆ. ಹೀಗಾಗಿ ವಿಷಹಾರ ಸೇವಿದ ಮಕ್ಕಳು ಏಕಾಏಕಿ ವಾಂತಿ ಹಾಗೂ ಭೇದಿ ಮಾಡಕೊಳ್ಳಲು ಶುರುಮಾಡಿದ್ದರು.
ಆರಂಭದಲ್ಲಿ ಓರ್ವ ವಿದ್ಯಾರ್ಥಿಗೆ ವಾಂತಿ ಭೇದಿ ಶುರುವಾಗಿತ್ತು. ಕೆಲವೇ ಹೊತ್ತಿನಲ್ಲಿ 50ಕ್ಕೂ ಹೆಚ್ಚು ಮಕ್ಕಳಿಗೆ ವಾಂತಿ, ಭೇದಿ ಶುರುವಾಗಿತ್ತು. ತಕ್ಷಣ ಎಚ್ಚತ್ತುಕೊಂಡು ಗುರುಕುಲದ ಶಿಕ್ಷಕರು ಮಕ್ಕಳನ್ನ ಹುಮ್ನಾಬಾದ್ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು.
ಇನ್ನೂ ಸುದ್ದಿ ತಿಳಿಯುತ್ತಿದಂತೆ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ಹಾಗೂ ಚಂದ್ರಶೇಕರ್ ಪಾಟೀಲ್ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದರು. ಮಕ್ಕಳು ತಿಂದ ಆಹಾರ ಪರಿಶೀಲನೆ ಕಳುಹಿಸಿ ಏನು ಸಮಸ್ಯೆ ಆಗಿದೆ ಅನ್ನೋದರ ಬಗ್ಗೆ ತಿಳಿಯಬೇಕಿದೆ ಎಂದು ಡಾ ಚಂದ್ರಶೇಖರ ಪಾಟೀಲ್ ತಿಳಿಸಿದ್ದರು. ಮಕ್ಕಳ ವಿಶೇಷ ತಜ್ಞರಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದರು.
Author: VS NEWS DESK
pradeep blr