ಮೈಸೂರು ಅರಮನೆಯ ಪ್ರಸಿದ್ಧ ಚಿನ್ನದ ಅಂಬಾರಿಯ ವೀಕ್ಷಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. 750 ಕೆಜಿ ತೂಕದ ಈ ಅಂಬಾರಿಯ ಕೆಳಭಾಗ ಮತ್ತು ಹಿಂಭಾಗದ ಮರದ ಕೆಲಸ ಸೇರಿದಂತೆ ಹಲವು ರಿಪೇರಿ ಕಾರ್ಯಗಳು ನಡೆಯುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರವಾಸಿಗರಿಗೆ ಇದು ನಿರಾಶೆಯನ್ನುಂಟು ಮಾಡಿದ್ದರೂ, ಅಂಬಾರಿಯ ಸಂರಕ್ಷಣೆಗಾಗಿ ಈ ಕ್ರಮ ಅವಶ್ಯಕವಾಗಿದೆ
ಮೈಸೂರು, ಡಿಸೆಂಬರ್ 06: ಅರಮನೆ (Palace) ಮತ್ತು ಅಂಬಾರಿಯನ್ನು (Ambari) ವೀಕ್ಷಿಸಲು ನಿತ್ಯ ಸಾವಿರಾರು ಜನರು ಮೈಸೂರಿಗೆ (Mysore) ತೆರಳುತ್ತಾರೆ. ಅರಮನೆಯೊಳಗೆ ಅಂಬಾರಿಯನ್ನು ಕಂಡು ಅನೇಕರು ಸೆಲ್ಫಿ ತೆಗೆದುಕೊಳ್ಳುತ್ತಾರೆ. ಆದರೆ, ಕೆಲ ದಿನಗಳ ಕಾಲ 750 ಕೆಜಿ ತೂಕದ ಅಂಬಾರಿ ವೀಕ್ಷಣೆಗೆ ಅವಕಾಶವಿರುವುದಿಲ್ಲ ಟಿವಿ9ಗೆ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಮೈಸೂರು ಅರಮನೆಯಲ್ಲಿ ಮೊದಲು ಗಮನ ಸೆಳೆಯುವುದು ಚಿನ್ನದ ಅಂಬಾರಿ. ಆದರೆ, ಅಂಬಾರಿ ವೀಕ್ಷಣೆಗೆ ನಿರ್ಬಂಧ ಹೇರಿದ್ದು ಪ್ರವಾಸಿಗರಲ್ಲಿ ನಿರಾಸೆ ಉಂಟು ಮಾಡಿದೆ. ಅಂಬಾರಿ ಕೆಳಗೆ ಹಾಗೂ ಹಿಂಭಾಗ ಮರದ ಕೆಲಸ, ಸೇರಿದಂತೆ ವಿವಿಧ ರಿಪೇರಿ ಕೆಲಸ ಇರವುದರಿಂದ ವೀಕ್ಷಣೆಗೆ ಬ್ರೇಕ್ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಚಿನ್ನದ ಅಂಬಾರಿ ವೀಕ್ಷಣೆಗೆ ಅವಕಾಶವಿಲ್ಲ.