ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್‌? ಸೋಶಿಯಲ್‌ ಮೀಡಿಯಾದಲ್ಲಿ ಫುಲ್ ವೈರಲ್‌

ಅಶ್ಲೀಲ ವಿಡಿಯೋಗಳು ವೈರಲ್‌ ಆಗಿರುವ ವಿಚಾರದಲ್ಲಿ ತಮಿಳು, ತೆಲುಗು ಹಾಗೂ ಮಲೆಯಾಳಿ ಸಿನಿಮಾಗಳಲ್ಲಿ ಅಭಿನಯಿಸಿರುವ ಖ್ಯಾತ ನಟಿಯೊಬ್ಬರು ಸುದ್ದಿಯಲ್ಲಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಈ ನಟಿಯದ್ದು ಎನ್ನಲಾದ ಖಾಸಗಿ ವಿಡಿಯೋ ಬಗ್ಗೆ ಭಾರಿ ಚರ್ಚೆಗಳು ನಡೆಯುತ್ತಿವೆ.

ನಟಿ ಪ್ರಜ್ಞಾ ನಾಗ್ರಾ ಅವರ ಖಾಸಗಿ ವಿಡಿಯೋಗಳು ಎಂಬರ್ಥದಲ್ಲಿ ಕೆಲ ಅಶ್ಲೀಲ ವಿಡಿಯೋಗಳ ಸ್ಕ್ರೀನ್‌ಶಾಟ್‌ಗಳು ಎಲ್ಲೆಡೆ ಹರಿದಾಡಿವೆ. ಆದರೆ, ಈ ವಿಡಿಯೋಗಳ ಅಸಲಿಯತ್ತು ಇನ್ನೂ ತಿಳಿದುಬಂದಿಲ್ಲ. ಎಕ್ಸ್‌ (ಟ್ವಿಟರ್‌) ಸೇರಿದಂತೆ ಸೋಶಿಯಲ್‌ ಮೀಡಿಯಾದಲ್ಲಿ ಸದ್ಯ ಪ್ರಜ್ಞಾ ನಾಗ್ರಾ ಅವರ ಹೆಸರು ಚರ್ಚೆಯಲ್ಲಿದೆ.

Private Videos And Explicit Photos Allegedly Linked To Actress Pragya Nagra Go Viral

ಈ ಬಗ್ಗೆ ಹಲವು ಮಾಧ್ಯಮಗಳಲ್ಲೂ ವರದಿಯಾಗಿದ್ದು, ನಟಿ ಈ ಬಗ್ಗೆ ಇಲ್ಲಿವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಈ ಸ್ಕ್ರೀನ್‌ಶಾಟ್‌ಗಳನ್ನು ಹಲವು ಹಂಚಿಕೊಂಡಿದ್ದು, ಪ್ರಜ್ಞಾ ನಾಗ್ರಾ ಅವರ ಖಾಸಗಿ ವಿಡಿಯೋ ಲೀಕ್‌ ಆಗಿದೆ ಎಂದು ಕೆಟ್ಟದಾಗಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಎಕ್ಸ್‌ನಲ್ಲೂ ಅವರ ಹೆಸರು ಟ್ರೆಂಡಿಂಗ್‌ನಲ್ಲಿದೆ.

ಈ ಸ್ಕ್ರೀನ್‌ ಶಾಟ್‌ಗಳಲ್ಲಿನ ಫೋಟೋಗಳನ್ನು ಬ್ಲರ್‌ ಮಾಡಲಾಗಿದ್ದು, ಅವು ಆ ನಟಿಯದ್ದೇ ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ ಎಂದು ಕೆಲ ನೆಟ್ಟಿಗರು ಆಕ್ಷೇಪಿಸಿದ್ದಾರೆ. ಇದು ನಟಿಯ ಹೆಸರನ್ನು ಹಾಳು ಮಾಡಲು ಯಾರೋ ಮಾಡಿರುವ ಸಂಚು ಎಂದೂ ಅನುಮಾನ ವ್ಯಕ್ತಪಡಿಸಿದ್ದಾರೆ. ಕೆಲವರು ಈಗೆಲ್ಲ ಡೀಪ್‌ ಫೇಕ್‌ ಜಮಾನ. ಇದು ಕೂಡ ಡೀಪ್‌ ಫೇಕ್‌ ಆಗಿರಬಹುದು ಎಂದು ಹೇಳುತ್ತಿದ್ದಾರೆ.

Private Videos And Explicit Photos Allegedly Linked To Actress Pragya Nagra Go Viral

ನಟಿಯ ಹಿನ್ನೆಲೆ ಏನು?: ಪ್ರಜ್ಞಾ ನಾಗ್ರಾ ಅವರು ಮೂಲತಃ ಹರಿಯಾಣದ ಅಂಬಾಲಾ ಜಿಲ್ಲೆಯ ಪಂಜಾಬಿ ಕುಟುಂಬದವರು. ದೆಹಲಿಯಲ್ಲಿ ಶಿಕ್ಷಣ ಶಿಕ್ಷಣ ಪೂರ್ಣಗೊಳಿಸಿ, ಬಳಿಕ ಮಾಡೆಲಿಂಗ್‌ನಲ್ಲಿ ತನ್ನ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದರು. ಬಳಿಕ ಜಾಹೀರಾತುಗಳಲ್ಲಿ ಮಿಂಚಿದ್ದರು. ಚೆನ್ನೈನಲ್ಲಿ ಅವರು ಕೆಲಕಾಲ ಇದ್ದಿದ್ದರಿಂದ ಸಿನಿಮಾರಂಗದತ್ತಲೂ ಅವರಿಗೆ ಅವಕಾಶಗಳು ಅರಸಿ ಬಂದವು.

2022ರಲ್ಲಿ ಅವರು ‘ವರಲಾರು ಮುಕ್ಕಿಯಂ’ ಎನ್ನುವ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಪ್ರಜ್ಞಾ ಕಾಲಿಟ್ಟಿದ್ದರು. ಆ ಸಿನಿಮಾದಲ್ಲಿ ಅವರು ಮಲಯಾಳಿ ಹುಡುಗಿ ಪಾತ್ರದಲ್ಲಿ ನಟಿಸಿದ್ದರು. ಬಳಿಕ ಮಲಯಾಳಂ ಚಿತ್ರ ‘ನಧಿಕಲಿಲ್ ಸುಂದರಿ ಯಮುನಾ’ (2023)ರಲ್ಲೂ ತಮ್ಮ ಚೊಚ್ಚಲ ಪ್ರವೇಶ ಮಾಡಿದರು. ನಂತರ ಟಾಲಿವುಡ್‌ನ ಸಿನಿಮಾಗಳಲ್ಲೂ ಅವರು ನಟಿಸಿದ್ದರು. ಸದ್ಯ ವೈರಲ್‌ ವಿಡಿಯೋ ವಿಚಾರದಲ್ಲಿ ನಟಿ ಪ್ರಜ್ಞಾ ಅವರ ಹೆಸರು ಚರ್ಚೆಯಲ್ಲಿದೆ.

Private Videos And Explicit Photos Allegedly Linked To Actress Pragya Nagra Go Viral

ನಟಿಗೆ ಇನ್‌ಸ್ಟಾಗ್ರಾಂನಲ್ಲಿ 1.1 ಮಿಲಿಯನ್ ಫಾಲೋವರ್ಸ್‌ ಇದ್ದಾರೆ. ಆದರೆ, ನಟಿಯಿಂದ ಅಥವಾ ಅವರ ಅಧಿಕೃತ ಖಾತೆಗಳಿಂದ ಯಾವುದೇ ಸ್ಪಷ್ಟನೆ ಈವರೆಗೆ ಬಂದಿಲ್ಲ. ಮತ್ತೊಂದೆಡೆ ನಟಿ ಅವರದ್ದು ಎನ್ನಲಾದ ಅಶ್ಲೀಲ ಸ್ಕ್ರೀನ್‌ಶಾಟ್‌ಗಳು ಎಲ್ಲೆಡೆ ಹರಿದಾಡುತ್ತಿದ್ದು, ಅವರ ಹೆಸರಿನಲ್ಲಿ ವೈರಲ್‌ ಆಗುತ್ತಿವೆ. ಈ ವಿಚಾರ ಸೋಶಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಇನ್ನು ಈ ಬಗ್ಗೆ ಹಲವು ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಇದರ ಅಸಲಿಯತ್ತು ಏನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ..

ಬಿಸಿ ಬಿಸಿ ಸುದ್ದಿ

ಕ್ರಿಕೆಟ್ ಲೈವ್ ಸ್ಕೋರ್

ಚಿನ್ನ ಮತ್ತು ಬೆಳ್ಳಿ ಬೆಲೆಗಳು