ಬೆಂಗಳೂರು, ಜ.13: ಬೆಂಗಳೂರಿನ ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ, ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಮೆಟ್ರೋ ಸೇವೆಯ ಆರಂಭಿಕ ಸಮಯದಲ್ಲಿ ಬದಲಾವಣೆ ಮಾಡುವ ನಿರ್ಧಾರವನ್ನು ಘೋಷಿಸಿದೆ. ಜನವರಿ 13ರಿಂದ ಪ್ರತಿ ಸೋಮವಾರ ಬೆಳಿಗ್ಗೆ 4:15 ಕ್ಕೆ ಮೆಟ್ರೋ ಸೇವೆ ಪ್ರಾರಂಭವಾಗಲಿದೆ.
ಪ್ರಸ್ತುತ, ನಮ್ಮ ಮೆಟ್ರೋ ಪ್ರತಿದಿನ ಬೆಳಿಗ್ಗೆ 5:00 ಕ್ಕೆ ಸೇವೆ ಪ್ರಾರಂಭಿಸುತ್ತಿದೆ. ಆದರೆ, ಜನವರಿ 13 ರಿಂದ ಪ್ರತಿ ಸೋಮವಾರ ಮಾತ್ರ ಸೇವೆ 45 ನಿಮಿಷಗಳಷ್ಟು ಮುಂಚಿನ ಸಮಯವಾದ ಬೆಳಿಗ್ಗೆ 4:15 ಕ್ಕೆ ಆರಂಭವಾಗುವುದು. ಈ ನಿರ್ಧಾರವು ಮುಂಜಾನೆ ರೈಲು ನಿಲ್ದಾಣ ಮತ್ತು ಬಸ್ ನಿಲ್ದಾಣ ತಲುಪಬೇಕಾದ ಪ್ರಯಾಣಿಕರ ಅನುಕೂಲಕ್ಕಾಗಿ ತೆಗೆದುಕೊಳ್ಳಲಾಗಿದೆ.ಮತ್ತೆಲ್ಲಾ ದಿನಗಳಲ್ಲಿ, ಮೆಟ್ರೋ ಸೇವೆ ಎಂದಿನಂತೆ ಬೆಳಿಗ್ಗೆ 5:00 ಕ್ಕೆ ಪ್ರಾರಂಭವಾಗುವುದು.
ಬಿಎಂಆರ್‌ಸಿಎಲ್‌ನ ಈ ಹೊಸ ಕ್ರಮವನ್ನು ಹಲವರು ಹರ್ಷದಿಂದ ಸ್ವಾಗತಿಸಿದ್ದಾರೆ. ಹೆಚ್ಚಿನ ಪ್ರಯಾಣಿಕರು ಭಾನುವಾರದಂದು ಸಹ ಇದೇ ರೀತಿಯ ಸೇವೆ ಜಾರಿಗೆ ತರಬೇಕೆಂದು ಮನವಿ ಮಾಡಿದ್ದಾರೆ.
ಸಾರ್ವಜನಿಕರು ತಮ್ಮ ಸುಗಮ ಪ್ರಯಾಣಕ್ಕಾಗಿ ಈ ಬದಲಾವಣೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಬಿಎಂಆರ್‌ಸಿಎಲ್ ಮನವಿ ಮಾಡಿದೆ. ಈ ಕ್ರಮವು ನಗರದಲ್ಲಿ ಹೆಚ್ಚುತ್ತಿರುವ ಜನಸಂದಣಿಯನ್ನು ನಿಭಾಯಿಸಲು ಸಹಾಯಕವಾಗಲಿದೆ. ನಮ್ಮ ಮೆಟ್ರೋ ಹೊಸ ಬದಲಾವಣೆಯಿಂದ ಮುಂಜಾನೆ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಾಗಿದ್ದು, ಈ ಸೇವೆಯನ್ನು ಯಶಸ್ವಿಯಾಗಿ ಜಾರಿಗೆ ತರಲು ಬಿಎಂಆರ್‌ಸಿಎಲ್ ಸಂಪೂರ್ಣ ಸಿದ್ಧವಾಗಿದೆ.
Author: VS NEWS DESK
pradeep blr