ಉಡುಪಿ: ಅಯೋಧ್ಯೆಯಲ್ಲಿ ರಾಮ ಮಂದಿರದ ಕನಸು ನನಸಾದ ಸಂಭ್ರಮವಾದ್ರೆ, ಇತ್ತ ಉಡುಪಿಯಲ್ಲಿ ಬಡ ಕುಟುಂಬದ ಮೊಗದಲ್ಲಿ ಮಂದಹಾಸ ಮೂಡಿಸುವ ಕಾರ್ಯವಾಗಿದೆ. ಪೇಜಾವರ ಶ್ರೀಗಳು (Pejawara Seer) ನೀಡಿದ ಕರೆಯಂತೆ ಬಡ ಕುಟುಂಬವೊಂದಕ್ಕೆ ರಾಮ ಭಕ್ತರು (Ram Devotees) ಸುಸಜ್ಜಿತ ಮನೆಯನ್ನ ಕಟ್ಟಿಕೊಟ್ಟಿದ್ದಾರೆ.
ಕೂಲಿ ಕಾರ್ಮಿಕನಿಗೆ ಮನೆ!
ಹೌದು, ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ಸಂಭ್ರಮವು ಉಡುಪಿಯ ಕೂಲಿ ಕಾರ್ಮಿಕನ ಮನೆ ಕಟ್ಟುವ ಆಸೆಯನ್ನ ನೆರವೇರಿಸಿದೆ. ಮೂಡುತೋನ್ಸೆ ಪರಿಸರದ ಬೋಂಗ್ರ ಬೆಲ್ಚಡಾ ಎಂಬವರು ತನ್ನ ತಂಗಿಯ ಜೊತೆಗೆ ನೆಲೆಸಿದ್ದು, ಕೂಲಿ ಮಾಡಿದ ಕೆಲಸದಲ್ಲಿ ಮನೆ ಕಟ್ಟಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಜೋಪಡಿಯಲ್ಲಿ ನೆಲೆಸಿದ್ದ ಬೋಂಗ್ರ ಬೆಲ್ಚಡ ಅವರಿಗೆ ರಾಮ ಭಕ್ತರು ಸೇರಿ ಮನೆ ನಿರ್ಮಿಸಿದ್ದಾರೆ.
ಜಾಹೀರಾತು
ಇದನ್ನೂ ಓದಿ:
Grand Fair: ಉತ್ತರ ಕನ್ನಡದ ಭಟ್ಕಳದಲ್ಲಿ ನಡೆದ ಅದ್ಧೂರಿ ಸೋಡಿಗದ್ದೆಯ ಜಾತ್ರೆ!
ಕೊಪ್ಪಳದಲ್ಲಿ ನೀರು ನಾಯಿಗಳು ಪ್ರತ್ಯಕ್ಷ!
ಇನ್ನಷ್ಟು ಸುದ್ದಿ…
ಇದನ್ನೂ ಓದಿ:
Karnataka Summer: ಇಷ್ಟು ಬೇಗ ಚಳಿ ಮಾಯ! ಈ ವರ್ಷ ಬೇಗ ಬರಲಿದೆ ಬೇಸಿಗೆಯ ಬೇಗೆ
ಮನೆ ಬೇಕಾದ ಸಾಮಗ್ರಿ
ಈ ಮನೆಗಾಗಿ 30 ಜನರ ರಾಮಭಕ್ತರ ತಂಡ ಕಾರ್ಯ ಪ್ರವೃತ್ತಾರಾಗಿತ್ತು. ವಿವಿಧ ಸಂಘ, ಸಂಸ್ಥೆಗಳ ಹಾಗೂ ದಾನಿಗಳ ಸಹಕಾರದಿಂದ ಸುಮಾರು 10 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಮನೆ ನಿರ್ಮಾಣ ಮಾಡಲಾಗಿದೆ. ಈ ಮನೆಯನ್ನ ಈಗ ಆ ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ. ಸುಸಜ್ಜಿತ ಮನೆಯ ಜೊತೆಗೆ ಟಿವಿ, ಮಂಚ ಕವಾಟು ಉಡುಗೊರೆಯಾಗಿ ನೀಡಿದ್ದಾರೆ. ಬೊಂಗ್ರ ಬೆಲ್ಚಡ ಕುಟುಂಬದ ಮುಂದಿನ ಭವಿಷ್ಯಕ್ಜೆ ಎರಡು ಲಕ್ಷ ಹಣ ನೀಡಿ ಜೀವನ ಭದ್ರತೆ ಒದಗಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ
Source link
Author: VS NEWS DESK
pradeep blr