Search
Close this search box.

Udupi Krishna Puja: ಮುಂದಿನ ಎರಡು ವರ್ಷ ಉಡುಪಿ ಕೃಷ್ಣನ ಪೂಜೆಯ ಅಧಿಕಾರ ಇವರದ್ದೇ!

ಉಡುಪಿ:  ಕೃಷ್ಣ ಮಠದಲ್ಲಿ (Udupi Krishna Mutt) ಪರ್ಯಾಯ ಮಹೋತ್ಸವದ ಸಂಭ್ರಮ ಕಳೆಗಟ್ಟಿದೆ. ಅನ್ನಬ್ರಹ್ಮ ನಾಡಿನಲ್ಲಿ ಭಕ್ತರಿಗೆ ಅನ್ನ ಪ್ರಸಾದ ವಿತರಣೆಗಾಗಿ ವಿಶಾಲವಾದ ಪ್ರತ್ಯೇಕ ಪ್ರತ್ಯೇಕ ಭೋಜನ ಶಾಲೆಗಳು ಸಿದ್ದಗೊಳ್ಳುತ್ತಿದೆ. ಹಾಗಿದ್ದರೆ ಏನಿದು ಪರ್ಯಾಯ? ಈ ವರ್ಷ ಉಡುಪಿಯಲ್ಲಿ ಪರ್ಯಾಯ (Puthige Paryaya 2024) ಯಾರದ್ದು? ಕೃಷ್ಣ ಪೂಜೆಗೂ (Udupi Krishna Puja) ಪರ್ಯಾಯಕ್ಕೂ ಏನು ಸಂಬಂಧ? ಇಲ್ಲಿದೆ ನೋಡಿ ವಿವರ.

ಪರ್ಯಾಯ ಮಹೋತ್ಸವ
ಮತ್ತು ಮುಂದಿನ ದಿನಗಳಲ್ಲಿ ಕೃಷ್ಣ ದರುಶನಕ್ಕೆ (Udupi Krishna Temple Darshan) ಬರುವ ಭಕ್ತರಿಗೆ ನಿತ್ಯ ರಾತ್ರಿ, ಹಗಲು ಎನ್ನದೆ ನಿರಂತರ ಭೋಜನ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತಿದೆ.

ಜಾಹೀರಾತು

News18

ಪ್ರತಿದಿನ 15 ರಿಂದ 20 ಸಾವಿರ ಭಕ್ತರು ಆಗಮಿಸುತ್ತಾರೆ. ಅದರಲ್ಲೂ ಪರ್ಯಾಯ (Puthige Paryaya) ಸಂದರ್ಭ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಮಹೋತ್ಸವದಲ್ಲಿ ಭಾಗಿಯಾಗುವುದಕ್ಕಾಗಿಯೇ ಆಗಮಿಸುತ್ತಾರೆ. ಬರುವ ಭಕ್ತರಿಗೆ ನಿತ್ಯ ಅನ್ನಸಂರ್ತಪಣೆಗಾಗಿ ಸಿದ್ದತೆ ಜೋರಾಗಿದೆ.

News18

252 ನೇ ಪರ್ಯಾಯ ಮಹೋತ್ಸವ
ಸುಮಾರು 500 ವರ್ಷಗಳಿಗೂ ಅಧಿಕ ಇತಿಹಾಸವಿರುವ ಉಡುಪಿ ಪರ್ಯಾಯ ಮಹೋತ್ಸವ ಪ್ರತಿ ಎರಡು ವರ್ಷಕೊಮ್ಮೆ ಜನವರಿ 18 ರಂದು ನಡೆಯುತ್ತದೆ. ಈ ಬಾರಿ 252 ನೇ ಪರ್ಯಾಯ ಮಹೋತ್ಸವ ನಡೆಯುತ್ತಿದೆ.

News18

ಕೃಷ್ಣ ಮಠದ ದ್ವೈವಾರ್ಷಿಕ ಉತ್ಸವ
ಉಡುಪಿ ಕೃಷ್ಣಮಠದಲ್ಲಿ ಕಾಣಿಯೂರು ಮಠ, ಸೋದೆ ಮಠ, ಪುತ್ತಿಗೆ ಮಠ, ಅದಮಾರು ಮಠ, ಪೇಜಾವರ ಮಠ, ಪಲಿಮಾರು ಮಠ, ಕೃಷ್ಣಾಪುರ ಮಠ, ಶಿರೂರು ಮಠಗಳೆಂಬ ಎಂಟು ಮಠಗಳಿವೆ. ಕೃಷ್ಣ ಮಠದ ದ್ವೈವಾರ್ಷಿಕ ಉತ್ಸವವಾಗಿರುವ ಪರ್ಯಾಯ ಮಹೋತ್ಸವ 2 ವರ್ಷಕೊಮ್ಮೆ ನಡೆಯುತ್ತದೆ. ಈ ಪ್ರಕ್ರಿಯೆ ಮೂಲಕ ಅಷ್ಟಮಠಗಳ ಪೈಕಿ ಕೃಷ್ಣ ಮಠದ ಪೂಜಾ ಕೈಂಕರ್ಯದ ಹಾಗೂ ಮಠದ ಅಧಿಕಾರ ಹಸ್ತಾಂತರವಾಗುತ್ತದೆ. ಪರ್ಯಾಯ ಯಾರದ್ದಾಗಿರುತ್ತದೆಯೋ ಅವರಿಗೆ ಮುಂದಿನ ಎರಡು ವರ್ಷಗಳ ಕಾಲ ಉಡುಪಿ ಕೃಷ್ಣ ಮಠದ ಪೂಜೆಯ ಅಧಿಕಾರ ಸಂದುತ್ತದೆ.

News18

ಈ ಬಾರಿ ಪುತ್ತಿಗೆ ಮಠದ ಪರ್ಯಾಯ
ಈ ಬಾರಿ ಉಡುಪಿ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ಶ್ರೀಗಳದ್ದಾಗಿದೆ.  ಪುತ್ತಿಗೆ ಶ್ರೀಗಳ ನಾಲ್ಕನೇಯ ಬಾರಿಯ ಪರ್ಯಾಯ ಇದಾಗಿದ್ದು, 252ನೇ ಪರ್ಯಾಯ ಮಹೋತ್ಸವದಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಇದನ್ನೂ ಓದಿ:
Puthige Shri: ಹಯವದನ ಆಚಾರ್ಯರು ಪುತ್ತಿಗೆ ಶ್ರೀಗಳಾದ ಸ್ವಾರಸ್ಯಕರ ಕಥೆ!

ರಾಜಾಂಗಣದಲ್ಲಿ ದರ್ಬಾರ್
ಪುತ್ತಿಗೆ ಶ್ರೀ ಸರ್ವಜ್ಞ ಪೀಠವೇರಿ, ಅಕ್ಷಯ ಪಾತ್ರೆ ಸ್ವೀಕರಿಸಿ ಮುಂದಿನ ಎರಡು ವರ್ಷಗಳ ಕಾಲ ಕೃಷ್ಣ ಪೂಜೆಯ ಅಧಿಕಾರ ವಹಿಸಿಕೊಂಡಿದ್ದಾರೆ.

ಶೂರ್ಪನಖಿಯ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿಗಳು!


ಶೂರ್ಪನಖಿಯ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿಗಳು!

ಪರ್ಯಾಯ ಪೀಠವೇರಿದ ಬಳಿಕ ರಾಜಾಂಗಣದಲ್ಲಿ ದರ್ಬಾರ್ ನಡೆದಿದ್ದು, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಗಣ್ಯರು ಭಾಗಿಯಾಗಿದ್ದಾರೆ.

ಜಾಹೀರಾತು

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

Source link

VS NEWS DESK
Author: VS NEWS DESK

pradeep blr

ಬಿಸಿ ಬಿಸಿ ಸುದ್ದಿ

ಕ್ರಿಕೆಟ್ ಲೈವ್ ಸ್ಕೋರ್

ಚಿನ್ನ ಮತ್ತು ಬೆಳ್ಳಿ ಬೆಲೆಗಳು