ಉಡುಪಿ: ಇಂದಿನಿಂದ ಕೃಷ್ಣನೂರಿನಲ್ಲಿ ಪರ್ಯಾಯ ಸಂಭ್ರಮ. ಪುತ್ತಿಗೆ ಪರ್ಯಾಯ (Puttige Paryaya 2024) ಮಹೋತ್ಸವಕ್ಕೆ ಪೊಡವಿಗೊಡೆಯನ ಊರೇ ಸಿಂಗಾರಗೊಂಡಿದೆ. ಅನ್ನಬ್ರಹ್ಮನ ನಾಡಿನ ದಾಸೋಹಕ್ಕೆ ಹಸಿರು ಹೊರೆಕಾಣಿಕೆಯ ಮಹಾಪೂರವೇ ಹರಿದು ಬರುತ್ತಿದೆ. ಈ ನಡುವೆ ಈ ಬಾರಿಯ ವಿಶ್ವ ಪರ್ಯಾಯಕ್ಕೆ ವಿದೇಶಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದು, ಪುತ್ತಿಗೆ ಪರ್ಯಾಯಕ್ಕೆ ವಿದೇಶಿಗರು ಸಾಕ್ಷಿಯಾಗಲಿದ್ದಾರೆ.
ನಿರಂತರ ಭೋಜನ ವ್ಯವಸ್ಥೆ!
ಹೌದು, ಉಡುಪಿಯ ಕೃಷ್ಣ ಮಠದಲ್ಲಿ ಪುತ್ತಿಗೆ ಮಹೋತ್ಸವದ ಸಂಭ್ರಮ ಕಳೆಗಟ್ಟಿದೆ. ಅನ್ನಬ್ರಹ್ಮ ನಾಡಿನಲ್ಲಿ ಭಕ್ತರಿಗೆ ಅನ್ನ ಪ್ರಸಾದ ವಿತರಣೆಗಾಗಿ ವಿಶಾಲವಾದ ಪ್ರತ್ಯೇಕ ಪ್ರತ್ಯೇಕ ಭೋಜನ ಶಾಲೆಗಳು ಸಿದ್ದಗೊಳ್ಳುತ್ತಿದೆ. ಪರ್ಯಾಯ ಮಹೋತ್ಸವ ಮತ್ತು ಮುಂದಿನ ದಿನಗಳಲ್ಲಿ ಕೃಷ್ಣ ದರುಶನಕ್ಕೆ ಬರುವ ಭಕ್ತರಿಗೆ ನಿತ್ಯ ರಾತ್ರಿ, ಹಗಲು ಎನ್ನದೆ ನಿರಂತರ ಭೋಜನ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತಿದಿನ 15 ರಿಂದ 20 ಸಾವಿರ ಭಕ್ತರು ಆಗಮಿಸುತ್ತಾರೆ. ಅದರಲ್ಲೂ ಪರ್ಯಾಯ ಸಂದರ್ಭ ಲಕ್ಷಾಂತರ ಸಂಖ್ಯೆ ಯಲ್ಲಿ ಭಕ್ತರು ಮಹೋತ್ಸವದಲ್ಲಿ ಭಾಗಿಯಾಗುವುದಕ್ಕಾಗಿಯೇ ಆಗಮಿಸುತ್ತಾರೆ. ಬರುವ ಭಕ್ತರಿಗೆ ನಿತ್ಯ ಅನ್ನಸಂರ್ತಪಣೆಗಾಗಿ ಸಿದ್ದತೆ ಜೋರಾಗಿದೆ.
ಜಾಹೀರಾತು
ಇದನ್ನೂ ಓದಿ:
Suggi Habba: ಮಲೆನಾಡಿನಲ್ಲಿ ಮಹಿಳೆಯರ ಸುಗ್ಗಿ ಹಬ್ಬ; ಹೆಂಗಳೆಯರ ಸಂಭ್ರಮಕ್ಕೊಂದು ವೇದಿಕೆ!
ಆದಿಯೋಗಿ ಜೊತೆ ಇವುಗಳನ್ನೂ ನೋಡಿ
ಇನ್ನಷ್ಟು ಸುದ್ದಿ…
ಇದನ್ನೂ ಓದಿ:
School Holiday: ಜನವರಿ 22ರಂದು ಕರ್ನಾಟಕದ ಶಾಲಾ-ಕಾಲೇಜುಗಳಿಗೂ ರಜೆ ಇದ್ಯಾ? ಇಲ್ಲಿದೆ ಮಾಹಿತಿ
ಪರ್ಯಾಯಕ್ಕೆ ದೇಶ, ವಿದೇಶದ ಭಕ್ತರು!
ಪುತ್ತಿಗೆ ಪರ್ಯಾಯಕ್ಕಾಗಿ ಜಿಲ್ಲೆ, ಹೊರಜಿಲ್ಲೆಗಳಿಂದ ಹಸಿರು ಹೊರೆಕಾಣಿಕೆ ಮಹಾಪೂರವೇ ಹರಿದು ಬರುತ್ತಿದೆ. ಪುತ್ತಿಗೆ ಮಠ ಸುಗುಣೇಂದ್ರ ತೀರ್ಥರಿಗೆ ದೇಶ ಮಾತ್ರವಲ್ಲ ವಿದೇಶದಲ್ಲೂ ಅಧಿಕ ಸಂಖ್ಯೆಯ ಭಕ್ತ ಸಮೂಹ ಹೊಂದಿದ್ದಾರೆ. ಹೀಗಾಗಿ ಪುತ್ತಿಗೆ ಪರ್ಯಾಯಕ್ಕೆ ಅಮೇರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಸೇರಿದಂತೆ ನಾನಾ ದೇಶಗಳ ಭಕ್ತರು ಆಗಮಿಸಲಿದ್ದಾರೆ. ಒಟ್ಟಿನಲ್ಲಿ ಪುತ್ತಿಗೆ ಶ್ರೀಗಳ ನಾಲ್ಕನೇ ಬಾರಿಯ ಪರ್ಯಾಯಕ್ಕೆ ಕೃಷ್ಣ ನಗರಿ ಸಡಗರ, ಸಂಭ್ರಮದಿಂದ ಸಿದ್ಧವಾಗಿ ನಿಂತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ
Source link
Author: VS NEWS DESK
pradeep blr