ಉಡುಪಿ: ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದ ವಿವಾಹ ಕಾರ್ಯಕ್ರಮವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಸ್ನೇಹಿತನ ಮದುವೆಗೆ ಆತನ ಗೆಳೆಯರೆಲ್ಲರೂ ಸೇರಿಕೊಂಡು ಮಾಡಿದ ಅರೇಂಜ್ಮೆಂಟ್ ಮದುವೆ (Marriage) ಆಗಮಿಸಿದ್ದವರಿಗೆ ಸಖತ್ ಮನರಂಜನೆ ನೀಡಿತು. ಅದರಲ್ಲೂ ಕೋಳಿ ಅಂಕ, ಜೆಸಿಬಿ ವ್ಯವಸ್ಥೆಗಳಂತೂ ಭಾರೀ ಮಜಾ ಎನಿಸುವಂತಿತ್ತು. ಹಾಗಿದ್ರೆ ಹೇಗಿತ್ತು ಈ ಮದ್ವೆ ಕಾರ್ಯಕ್ರಮ ಅನ್ನೋದಕ್ಕೆ ಈ ಸ್ಟೋರಿ ನೋಡಿ.
**
**
ಮದುವೆ ಮಂಟಪದಲ್ಲಿ ಕೋಳಿ ಅಂಕ
ಬ್ರಹ್ಮಾವರದಲ್ಲಿ ನಡೆದ ಮಿಥುನ್ ಹಾಗೂ ಪೂಜಾ ಜೋಡಿಯ ವಿವಾಹ ಕಾರ್ಯಕ್ರಮವು ಎಲ್ಲರ ಗಮನ ಸೆಳೆಯಿತು. ಮದುವೆ ಮಂಟಪದಲ್ಲಿಯೇ ತುಳುನಾಡಿನ ಸಾಂಪ್ರದಾಯಿಕ ಕ್ರೀಡೆ ಕೋಳಿ ಅಂಕವನ್ನ ವಧು, ವರರ ಮೂಲಕ ಫೈಟ್ ನಡೆಸಿದರು. ಸ್ನೇಹಿತರ ಇಂತಹ ಕ್ರೇಝ್ ಹುಟ್ಟಿಸೋ ಯೋಜನೆಗೆಲ್ಲ ವಧು, ವರರು ಕೂಡಾ ಅಷ್ಟೇ ಸಪೋರ್ಟಿವ್ ಆಗಿ ಸಾಥ್ ನೀಡಿದರು.
ಜಾಹೀರಾತು
ಇದನ್ನೂ ಓದಿ:
Painting: ಎಲ್ಲರ ಗಮನ ಸೆಳೆಯುತ್ತಿರುವ ರಿಯಲಿಸ್ಟಿಕ್ ಪೇಂಟಿಂಗ್, ನೀವೂ ನೋಡಿ
ಇದನ್ನೂ ಓದಿ:
Karwar News: ಒಂದೇ ವರ್ಷದಲ್ಲಿ ಕಾರವಾರದ ಕ್ರಿಮ್ಸ್ನಲ್ಲೇ 225 ಕ್ಯಾನ್ಸರ್ ರೋಗಿಗಳ ಪತ್ತೆ
ಜೆಸಿಬಿಯಲ್ಲಿ ತೆರಳಿದ ನವ ದಂಪತಿ!
ಇನ್ನು ಮದುವೆ ಎಲ್ಲವೂ ಮುಗಿದ ಮೇಲೆ ನವ ದಂಪತಿ ವರನ ಮನೆಗೆ ಹೋಗಲು ಕಾರು ಬದಲಾಗಿ ಜೆಸಿಬಿ ಅರೇಂಜ್ ಮಾಡಲಾಗಿತ್ತು. ಜೆಸಿಬಿಯ ಮುಂಭಾಗಕ್ಕೆ ವಧು, ವರರು ಕೂರುವಂತಹ ಆಸನವನ್ನ ಅಳವಡಿಸಿ, ಜೆಸಿಬಿಯನ್ನ ಹೂಗಳಿಂದ ಅಲಂಕೃತಗೊಳಿಸಿ ಕರೆದೊಯ್ಯಲಾಯಿತು. ರಸ್ತೆಯುದ್ದಕ್ಕೂ ನವ ದಂಪತಿಯ ಸ್ನೇಹಿತರು ಹುಲಿ ಕುಣಿತಕ್ಕೆ ಹೆಜ್ಜೆ ಹಾಕುತ್ತಾ ಸಾಥ್ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ
Source link
Author: VS NEWS DESK
pradeep blr