ಉಡುಪಿ: ವಾರಾಂತ್ಯದಲ್ಲಿ ಸೂರ್ಯಾಸ್ತ ನೋಡೋ ಖುಷಿಯೇ ಬೇರೆ. ರಜೆಯ ಮಜಾ ಸೂರ್ಯಾಸ್ತದ ಜೊತೆಗೆ ಕಳೆದು ಹೋಗುತ್ತಲೇ ನೀಡುವ ಅನುಭವವೇ ಬೇರೆ. ಸೂರ್ಯಾಸ್ತ (Sunset) ನೋಡುವುದಕ್ಕೆ ಬೆಟ್ಟ, ಶಿಖರಗಳಿಗೆ ಹೋಗುವವರು ಜಾಸ್ತಿ. ಇಲ್ಲದೇ ಹೋದ್ರೆ, ಕರಾವಳಿಯ ಕಡಲತೀರಗಳಿಗೆ ಹೋಗಬಹುದಾಗಿದೆ. ಅಂತಹ ಪ್ರಕೃತಿ ಸೌಂದರ್ಯ ಹೊಂದಿರುವ ಬೀಚ್‌ಗಳಲ್ಲಿ ಕಾಪು ಬೀಚ್ (Kapu Beach) ಒಂದು. ಉಡುಪಿ ಜಿಲ್ಲೆಯ ಕಾಪು ತಾಲೂಕಿನಲ್ಲಿರುವ ಈ ಬೀಚ್ ಪ್ರವಾಸಿಗರ ಅತ್ಯಂತ ನೆಚ್ಚಿನ ಬೀಚ್‌ಗಳಲ್ಲಿ ಒಂದಾಗಿದೆ.
ಮಂಗಳೂರು, ಉಡುಪಿ ಕಡಲ ತೀರದಲ್ಲಿರುವ ಹಲವು ಬೀಚ್‌ಗಳಲ್ಲಿ ಭಾರೀ ವೈಶಿಷ್ಟ್ಯಪೂರ್ಣವಾಗಿದೆ. ಕಾಪು ಕಡಲ ಕಿನಾರೆಯಲ್ಲಿ ದೀಪಸ್ಥಂಭವನ್ನು (Light House) ಹೊಂದಿದ್ದು ಭಾರೀ ಆಕರ್ಷಣೀಯವಾಗಿದೆ. ಇಳಿಸಂಜೆ ಹೊತ್ತಿಗೆ ಕೆಂಪನೆಯ ಬಣ್ಣದಿಂದ ಕಡಲಿನಾಳಕ್ಕೆ ಇಳಿದು ಹೋಗುವ ಸೂರ್ಯನನ್ನ ನೋಡಲಂತೂ ಪ್ರವಾಸಿಗರು ಕಾತರದಿಂದ ಕಾಯುತ್ತಾರೆ.
ಜಾಹೀರಾತು
ಹೇಗಿದೆ ಬೀಚ್?
ಮಧ್ಯಾಹ್ನದ ಬಿಸಿಲು ಕಡಿಮೆಯಾಗುತ್ತಲೇ ಸಂಜೆಯ ಹೊತ್ತಿಗೆ ಈ ಬೀಚ್‌ಗೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲಿರುವ ಬಂಡೆ ಕಲ್ಲುಗಳೇ ಪ್ರಮುಖ ಆಕರ್ಷಣೆ. ಅದರಲ್ಲೂ 1901 ರಲ್ಲಿ ನಿರ್ಮಾಣವಾದ 27 ಮೀಟರ್ ಎತ್ತರದ ದೀಪಸ್ಥಂಭ ಬಂಡೆ ಕಲ್ಲಿನ ಮೇಲಿದ್ದು ಎಂತವರನ್ನೂ ಕೈ ಬೀಸಿ ಕರೆಯುತ್ತೆ.
ಇದನ್ನೂ ಓದಿ:
Anekere Basadi: ವರಂಗವನ್ನು ಹೋಲುವ ಉಡುಪಿಯ ಇನ್ನೊಂದು ಕೆರೆ ಬಸದಿ ಇಲ್ಲಿದೆ ನೋಡಿ!
ಈ ಲೈಟ್‌ಹೌಸ್ ತಲುಪಲು ಬಂಡೆಗಳನ್ನು ಏರುವುದಕ್ಕಾಗಿ ಮೆಟ್ಟಿಲುಗಳನ್ನ ಮಾಡಲಾಗಿದೆ. ಆದರೆ ಲೈಟ್‌ಹೌಸ್ ಮೇಲೇರಲು ನಿಗದಿತ ದರ ನೀಡಿ ಸಂಜೆ 4 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಅವಕಾಶವಿರುತ್ತದೆ. ವಾರಾಂತ್ಯದಲ್ಲಿ ಬೀಚ್ ಪ್ರವಾಸಿಗರಿಂದ ತುಂಬಿ ತುಳುಕುತ್ತದೆ. ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದಲೂ ಹಲವು ಕ್ರಮಗಳನ್ನು ಕೈಗೊಂಡಿದೆ.
ಕಟ್ಟಪ್ಪ, ಈ ‘ಬಾಹುಬಲಿ ಜಿಲೇಬಿ’ ತಿನ್ನಪ್ಪ!
ಇನ್ನಷ್ಟು ಸುದ್ದಿ…
ಇದನ್ನೂ ಓದಿ:
Gokarna: ಇವರು ಇತರರಂತಲ್ಲ! ಗೋಕರ್ಣಕ್ಕೆ ಬಂದ ಇಸ್ರೇಲ್ ಪ್ರವಾಸಿಗರು ಹೇಗಿರ್ತಿದ್ರು ಗೊತ್ತಾ?
ತಲುಪುವುದು ಹೇಗೆ?
ಕಾಪು ಬೀಚ್‌ಗೆ ತೆರಳಲು ಹತ್ತಿರದ ವಿಮಾನ ನಿಲ್ದಾಣ ಮಂಗಳೂರು ಆಗಿದ್ದು, ಇಲ್ಲಿಂದ 45 ಕಿಲೋ ಮೀಟರ್ ದೂರದಲ್ಲಿದೆ. ಇನ್ನು ಕಾಪುವಿನಿಂದ 15 ಕಿಲೋ ಮೀಟರ್ ದೂರದಲ್ಲಿರುವ ಉಡುಪಿಯಲ್ಲಿ ರೈಲು ನಿಲ್ದಾಣವಿದೆ. ಮಂಗಳೂರು ನಗರದಿಂದ ತೆರಳುವುದಿದ್ದರೆ 45 ಕಿಲೋ ಮೀಟರ್ ಇದ್ದು, ಎಕ್ಸ್‌ಪ್ರೆಸ್ ಬಸ್‌ಗಳು ಕಾಪು ಪೇಟೆಯವರೆಗೂ ಇದೆ. ಅನಂತರ ಬಾಡಿಗೆ ಆಟೋ, ಕ್ಯಾಬ್‌ಗಳಿಂದ ತೆರಳಬಹುದಾಗಿದೆ. ಬೀಚ್‌ಗೆ ತಾಗಿಕೊಂಡೇ ಹೋಟೆಲ್, ಅಂಗಡಿಗಳಿವೆ. ಸಾಯಂಕಾಲದ ವೇಳೆಗಷ್ಟೆ ತೆರೆದುಕೊಳ್ಳುವ ಚುರುಮುರಿ ಅಂಗಡಿಗಳು ಇಲ್ಲಿವೆ. ಹತ್ತಿರದಲ್ಲೇ ವಿವಿಧ ದರದಲ್ಲಿ ಸೇವೆ ನೀಡುವ ರೆಸಾರ್ಟ್‌ಗಳು ಇಲ್ಲಿವೆ.
ಜಾಹೀರಾತು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ
Source link
Author: VS NEWS DESK
pradeep blr