Search
Close this search box.

Parshurama Theme Park: ಪರಶುರಾಮ ಥೀಂ ಪಾರ್ಕ್‌ಗೆ ಪ್ರವೇಶ ನಿರ್ಬಂಧ ವಿಸ್ತರಣೆ

 

ಉಡುಪಿ: ಕರಾವಳಿಯ ಪ್ರವಾಸಿ ತಾಣಗಳ ಸಾಲಿಗೆ ಇತ್ತೀಚೆಗಷ್ಟೇ ಸೇರ್ಪಡೆಗೊಂಡ ಕಾರ್ಕಳದ ಪರಶುರಾಮ ಥೀಂ ಪಾರ್ಕ್‌ಗೆ (Parashurama Theme Park) ವಿಧಿಸಲಾಗಿದ್ದ ಸಾರ್ವಜನಿಕ ಭೇಟಿ ನಿರ್ಬಂಧವನ್ನು ಮುಂದುವರೆಸಲಾಗಿದೆ.

ಈ ಕುರಿತು ಕಾರ್ಕಳ ತಹಶೀಲ್ದಾರ್‌ ಆದೇಶ ಜಾರಿಗೊಳಿಸಿದ್ದಾರೆ. ಯಾವುದೇ ಕಾರಣಕ್ಕೂ ಸದ್ಯ ಮುಂದುವರೆದಿರುವ ಕಾಮಗಾರಿ ಮುಗಿಯದ ಹೊರತು ಸಾರ್ವಜನಿಕರ ಭೇಟಿಗೆ ನಿರ್ಬಂಧ ಮುಂದುವರೆಯುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:
Dasara Elephant: 140 ಕೆಜಿ ತೂಕ ಹೆಚ್ಚಿಸಿಕೊಂಡ ಕ್ಯಾಪ್ಟನ್; ಈಗ ಅಭಿಮನ್ಯು ತೂಕವೆಷ್ಟು ಗೊತ್ತಾ?

ಇದೇ ವರ್ಷದ ಜನವರಿ 27 ರಂದು ಪರಶುರಾಮ ಥೀಂ ಪಾರ್ಕ್‌ ಅನ್ನ ಕಾರ್ಕಳದಲ್ಲಿ ಉದ್ಘಾಟಿಸಲಾಗಿತ್ತು. 100 ಅಡಿ ಎತ್ತರದ ಕುಂಜಬೆಟ್ಟದಲ್ಲಿ ಈ ಥೀಂ ಪಾರ್ಕ್‌ ಇದ್ದು ಸಾರ್ವಜನಿಕರ ಅಪಾರ ಆಕರ್ಷಣೆಗೆ ಒಳಗಾಗಿದೆ. ಆದರೆ, ಥೀಂ ಪಾರ್ಕ್‌ನಲ್ಲಿ ಪರಶುರಾಮ ಮೂರ್ತಿಗೆ ಸಿಡಿಲು ನಿರೋಧಕ ಮತ್ತು ತುಕ್ಕು ನಿರೋಧಕ ಲೇಪನ ಸೇರಿದಂತೆ ಮುಕ್ತಾಯ ಹಂತದ ಕೆಲಸ ಕಾರ್ಯಗಳು ಬಾಕಿಯಾಗಿವೆ. ಹೀಗಾಗಿ ಜೂನ್‌ 26 ರಿಂದ ಸೆಪ್ಟಂಬರ್‌ ಅಂತ್ಯದವರೆಗೆ ಪ್ರವಾಸಿಗರ ಭೇಟಿಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು.

ಜಾಹೀರಾತು

ಇದನ್ನೂ ಓದಿ:
Wife Name In Mobile: ಮೊಬೈಲ್‍ನಲ್ಲಿ ಪತ್ನಿ ಹೆಸರು ಸೇವ್ ಮಾಡಿದ್ದು ಹೀಗೆ, ಕೋರ್ಟ್ ಮೆಟ್ಟಿಲೇರಿದ ಪ್ರಕರಣ!

ರಾವಣನ ನಂತ್ರ ಚಿನ್ನದ ಜನಿವಾರ ಹಾಕಿದವ್ರು ಇವ್ರೇ!
ಇನ್ನಷ್ಟು ಸುದ್ದಿ…

ಇದೀಗ ಕಾಮಗಾರಿ ಮುಗಿಯಲು ಇನ್ನೂ ಸಮಯಾವಕಾಶವನ್ನು ನಿರ್ಮಿತಿ ಕೇಂದ್ರ ಕೇಳಿದ್ದು ಈ ಹಿನ್ನೆಲೆಯಲ್ಲಿ ನವೆಂಬರ್‌ ತಿಂಗಳವರೆಗೆ ಪ್ರವೇಶ ನಿರ್ಬಂಧಿಸಿ ಆದೇಶಿಸಲಾಗಿದೆ.

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

Source link

VS NEWS DESK
Author: VS NEWS DESK

pradeep blr